ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸಿನಿಮಾ ಹಾಗೂ ರಿಯಾಲಿಟಿ ಶೋಗಳಿಗೆ ನವರಸ ನಾಯಕ ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ: ಸ್ವತಃ ಜಗ್ಗೇಶ್ ಬಾಯಿ ಬಿಟ್ರು ಸತ್ಯ
ಸಂಭಾವನೆ ವಿಷಯದಲ್ಲಿ ‘ಸಂಭಾವನೆ ವಿಚಾರದಲ್ಲಿ ನನ್ನ ಹತ್ತಿರ ಮುಚ್ಚುಮರೆ ಇಲ್ಲ. ಸಿನಿಮಾದಲ್ಲಿ ನಟಿಸಲು ಎರಡು ಕೋಟಿ ತಗೆದುಕೊಳ್ಳುತ್ತೇನೆ. ಟಿವಿ ಅವರು ಮೂರು ಕೋಟಿ ಕೊಡುತ್ತಾರೆ. ನನ್ನ ಹೆಂಡತಿ ಮಕ್ಕಳನ್ನು ನೆಮ್ಮದಿಯಿಂದ ಸಾಕುವುದಕ್ಕೆ ಇಷ್ಟು ಸಾಕಾಗುತ್ತದೆ. ಬೇರೆ ಯಾವ ವಿಚಾರಕ್ಕೂ ನಾನು ತಲೆ ಹಾಕುವುದಿಲ್ಲ’ ಎನ್ನುವ ಮೂಲಕ ತಾವು ಪಡೆದುಕೊಳ್ಳುವ ಸಂಭಾವನೆ ಎಷ್ಟು ಅನ್ನೋದನ್ನು ಬಾಯಿ ಬಿಟ್ಟಿದ್ದಾರೆ.
ಸಂಭಾವನೆ ಜೊತೆಗೆ ಎರಡೆರಡು ಮದುವೆಯಾದ ಕಲಾವಿದರ ಬಗ್ಗೆ ಮಾತನಾಡಿದ್ದಾರೆ. ‘ನನಗಿರೋದು ಒಬ್ಬರೆ ಹೆಂಡ್ತಿ, ಎರಡು ಮಕ್ಕಳು. ನನ್ನ ಮಕ್ಕಳು ನನ್ನ ಹೆಸರನ್ನು ಎಲ್ಲಿಯೂ ಬಳಸಿಕೊಳ್ಳುವುದಿಲ್ಲ. ನಾನೂ ಕೂಡ ಯಾರ ತಂಟೆಗೂ ಹೋಗುವುದಿಲ್ಲ. ಹಾಗಾಗಿ ನಮ್ಮದು ಸುಖಿ ಕುಟುಂಬ. ದೇವರನ್ನು ನಂಬಿಕೊಂಡು ಬದುಕಿದ್ದೇನೆ. ನಮಗೆಲ್ಲ ಭಗವಂತ ಆನಂದದ ಜೀವನ ಕೊಟ್ಟಿದ್ದಾನೆ ಎಂದರು.
ಸಿನಿಮಾ ರಂಗದಲ್ಲಿ ಸಾಕಷ್ಟು ಕಷ್ಟ ಪಟ್ಟು ಜಗ್ಗೇಶ್ ಮೇಲೆ ಬಂದವರು. ಇಂದು ಜಗ್ಗೇಶ್ ಹೆಸರು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಅದರ ಹಿಂದೆ ಸಾಕಷ್ಟು ಶ್ರಮವಿದೆ. ಈ ಹಿಂದೆ ಶೂಟಿಂಗ್ ಗೆ ಹೋಗುವಾಗ ಎಷ್ಟೆಲ್ಲ ಕಷ್ಟ ಪಡುತ್ತಿದ್ದೆವು ಎನ್ನುವುದನ್ನೂ ಹೇಳಿಕೊಂಡಿದ್ದಾರೆ. ಸಿನಿಮಾ ರಂಗಕ್ಕೆ ಬಂದಾಗ, ಒಂದು ರೀತಿಯಲ್ಲಿ ಭಯದಿಂದಲೇ ಶೂಟಿಂಗ್ ಗೆ ಹೋಗುತ್ತಿದ್ದೆ. ಯಾರೂ ಆಗ ಪ್ರೀತಿಯಿಂದ ಕಲಿಸಲೇ ಇಲ್ಲ. ಕಷ್ಟಪಟ್ಟು ನಾನು ಈ ಮಟ್ಟಕ್ಕೆ ಬಂದಿರುವುದಾಗಿ ಹೇಳುವ ಮೂಲಕ ಜಗ್ಗೇಶ್ ತಮ್ಮ ಹಳೆಯ ಜೀವನವನ್ನು ಮೆಲುಕು ಹಾಕಿದರು.
