ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಜೊತೆ ಜೊತೆಯಲಿ ಧಾರಾವಾಹಿ ನಟ ಆರ್ಯವರ್ಧನ್ ಚಾಲಾಯಿಸುತ್ತಿದ್ದ ಕಾರು ಭೀಕರ ಅಪಘಾತ: ಮುಗಿದೇ ಹೋಯ್ತಾ ಅನಿರುದ್ಧ್ ನಟಿಸುತ್ತಿದ್ದ ಪಾತ್ರ?
ಜೊತೆ ಜೊತೆಯಲಿ ತಂಡ ಹಂಚಿಕೊಂಡಿರುವ ಪ್ರೋಮೋದಲ್ಲಿ ಧಾರಾವಾಹಿ ನಾಯಕ ಆರ್ಯವರ್ಧನ್ ಸ್ಪೀಡ್ ಆಗಿ ಕಾರು ಓಡಿಸಿಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರ್ಯವರ್ಧನ್ ಇದ್ದ ಕಾರು ಪಲ್ಟಿ ಹೊಡೆಯುತ್ತ ಹೋಗುತ್ತದೆ.
ಈಗಾಗಲೇ ಆರ್ಯವರ್ಧನ್ ಸಹೋದರನ ಪಾತ್ರಕ್ಕೆ ಹರೀಶ್ ರಾಜ್ ಎಂಟ್ರಿಕೊಟ್ಟಿದ್ದಾರೆ. ಆರ್ಯವರ್ಧನ್ ಆಕ್ಸಿಡೆಂಟ್ ಹಿಂದೆ ಹರೀಶ್ ರಾಜ್ ಕೈವಾಡವಿದೆಯಾ? ಆ ಮೂಲಕ ಸಾಕಷ್ಟು ಸಾಲ ಮಾಡಿಕೊಂಡಿರುವ ಹರೀಶ್ ರಾಜ್ ಅಧಿಪತಿ ಆಗಲು ನೋಡುತ್ತಿದ್ದಾರಾ ಎಂಬ ಅನುಮಾನ ಪ್ರೋಮೋ ನೋಡಿದ್ರೆ ಅನಿಸುತ್ತೆ.
ಆಕ್ಸಿಡೆಂಟ್ ಬಳಿಕ ಆರ್ಯವರ್ಧನ್ ಮುಖಕ್ಕೆ ಪ್ಲ್ಯಾಸ್ಟಿಕ್ ಸರ್ಜರಿ ಮಾಡುತ್ತಾರಾ? ಆರ್ಯವರ್ಧನ್ ಪಾತ್ರಕ್ಕೆ ಮತ್ಯಾರೋ ಬರುತ್ತಾರಾ?ಅಥವಾ ಆರ್ಯವರ್ಧನ್ ಪಾತ್ರ ಇಲ್ಲಿಗೆ ಮುಗಿದು ಬಿಡ್ತಾ ಎಂಬ ಹತ್ತು ಹಲವು ಪ್ರಶ್ನೆಗಳು ವೀಕ್ಷಕರ ಮನಸ್ಸಲ್ಲಿ ಹುಟ್ಟಿಕೊಂಡಿದ್ದು ಕೆಲ ದಿನಗಳಲ್ಲೇ ಇದಕ್ಕೆಲ್ಲಾ ಉತ್ತರ ಸಿಗಲಿದೆ.
