ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸುಷ್ಮಿತಾ ಸೇನ್ ಬಾಳಿಗೆ ಎಕ್ಸ್ ಬಾಯ್ ಫ್ರೆಂಡ್ ಎಂಟ್ರಿ: ಮಾಜಿ ವಿಶ್ವಸುಂದರಿಯಿಂದ ದೂರವಾದ ಲಲಿತ್ ಮೋದಿ
ಈ ಮಧ್ಯೆ ಮಾಜಿ ಬಾಯ್ ಫ್ರೆಂಡ್ ರೋಹ್ಮನ್ ಶಾಲ್ ಜೊತೆ ಮತ್ತೆ ಸುಷ್ಮಿತಾ ಸುತ್ತಾಟ ನಡೆಸುತ್ತಿದ್ದಾರೆ.ಇತ್ತೀಚೆಗೆ ಇಬ್ಬರು ವಿದೇಶಕ್ಕೆ ಹೋಗಿ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಇದರಿಂದ ಲಲಿತ್ ಮೋದಿಗೆ ಸಾಕಷ್ಟು ಮುಜುಗರ ಆಗಿರುವ ಹಾಗಿದೆ. ಅದೇ ಕಾರಣಕ್ಕೆ ಸುಷ್ಮಿತಾರಿಂದ ಅಂತರ ಕಾಯ್ದುಕೊಳ್ಳಲು ಲಲಿತ್ ಮೋದಿ ಮುಂದಾಗಿದ್ದಾರೆ.
ಮಾಜಿ ಬಾಯ್ ಫ್ರೆಂಡ್ ಜೊತೆ ವಿದೇಶದಲ್ಲಿರುವ ಫೋಟೋವನ್ನು ಸುಷ್ಮಿತಾ ಫೋಸ್ಟ್ ಮಾಡುತ್ತಿದ್ದಂತೆ ಇತ್ತ ಲಲಿತ್ ಮೋದಿ ಆಕೆಯನ್ನ ತಮ್ಮ ಸೋಷಿಯಲ್ ಮೀಡಿಯಾದಿಂದ ಅನ್ ಫ್ರೆಂಡ್ ಮಾಡಿದ್ದಾರೆ. ಇನ್ಸ್ಟಾದಲ್ಲಿ ತಮ್ಮ ಹೆಸರಿನ ಮುಂದೆ ಹಾಕಿಕೊಂಡಿದ್ದ ಸುಷ್ಮಿತಾ ಹೆಸರನ್ನು ತೆಗೆದು ಹಾಕಿದ್ದಾರೆ. ಈ ಮೂಲಕ ಸುಷ್ಮಿತಾ ಪ್ರೀತಿಗೆ ಲಲಿತ್ ಮೋದಿ ಫುಲ್ ಸ್ಟಾಪ್ ಇಟ್ಟಿದ್ದಾರೆ.
