• January 2, 2026

ಪೋಸ್ಟರ್ ನೋಡಿ ಸಿನಿಮಾಗೆ ಸೂಕ್ತ ಶೀರ್ಘಿಕೆ ನೀಡಿ, ನಗದು ಬಹುಮಾನ ಗೆಲ್ಲಿ

ಒಂದು ಸಿನಿಮಾಗೆ ಟೈಟಲ್ ಎಂಬುದು ಸಾಕಷ್ಟು ಇಂಫರ್ಟೆಂಟ್ ಆಗಿರುತ್ತೆ. ಅದೆಷ್ಟೋ ಸಿನಿಮಾಗಳು ಟೈಟಲ್ ನಿಂದಲೇ ಗೆದ್ದಿರೋದು ಇದೆ. ಸದ್ಯ ಹೊಸ ತಂಡವೊಂದು ತಮ್ಮ ಸಿನಿಮಾಗೆ ಸೂಕ್ತ ಟೈಟಲ್ ನೀಡದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಹೌದು.ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೆ ಇರುತ್ತವೆ. ಸಾಕಷ್ಟು ಹೊಸ ಹೊಸ ಪ್ರತಿಭೆಗಳು ತಮ್ಮ ಸಿನಿಮಾಗಳನ್ನು ಪರಭಾಷೆಯಲ್ಲೂ ಗುರುತಿಸುವಂತೆ ಹೆಸರು ಮಾಡಿವೆ. ಸದ್ಯ ಅಂತದ್ದೆ ಹೊಸ ತಂಡವೊಂದು ತಮ್ಮ ಸಿನಿಮಾಗೆ ಪ್ರೇಕ್ಷಕರೆ ಸೂಕ್ತ ಟೈಟಲ್ ಸೂಚಿಸಲಿ ಎನ್ನುತ್ತಿದೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾದ ಸ್ಟಾಕರ್ಸ್ ಸಿನಿಮಾಗೆ ಬಂಡವಾಳ ಹೂಡಿದ್ದ ಎಸ್‌ಎಂಎಲ್ ಪ್ರೊಡಕ್ಷನ್ ಸಂಸ್ಥೆಯಿಂದ ಇದೀಗ 2ನೇ ಚಿತ್ರ ರೆಡಿಯಾಗುತ್ತಿದೆ. ಸದ್ಯ ಹೊಸ ಪ್ರಾಜೆಕ್ಟ್ ಗೆ ‘ಪ್ರೊಡಕ್ಷನ್ ನಂ.2’ ಎಂದು ಕರೆಯಲಾಗುತ್ತಿದ್ದು, ಚಿತ್ರಕ್ಕೆ ಸೂಕ್ತ ಶೀರ್ಷಿಕೆ ನೀಡಿದವರಿಗೆ 21 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಚಿತ್ರತಂಡ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ ರಿಲೀಸ್​ ಮಾಡಿದ್ದ ಇದನ್ನು ನೋಡಿಕೊಂಡು ಸೂಕ್ತ ಟೈಟಲ್ ನೀಡಲು ಚಿತ್ರತಂಡ ಮನವಿ ಮಾಡಿದೆ. ರಮೇಶ್ ಎಂಬುವವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಪ್ರೊಡಕ್ಷನ್ ನಂ 2 ಸಿನಿಮಾ ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿ ಸಿದ್ದಗೊಳ್ಳಲಿದೆ. ಹೀಗಾಗಿ ಮೂರು ಭಾಷೆಗೂ ಸೂಕ್ತವಾಗುವಂತೆ ಟೈಟಲ್ ನೀಡಲು ಚಿತ್ರತಂಡ ಸೂಚಿಸದೆ. ಟೈಟಲ್ ಜೊತೆಗೆ ಸಣ್ಣದೊಂದು ವಿವರಣೆ ಕೂಡ ಇರಬೇಕು ಎಂದು ಚಿತ್ರತಂಡ ಹೇಳಿದೆ. ಅಲ್ಲದೆ 10 ಅರ್ಥಪೂರ್ಣ ಟೈಟಲ್ ಸೂಚಿಸಿದವರೆಗೆ ಸಿನಿಮಾದಲ್ಲಿ ನಟಿಸಲು ಅವಕಾಶವನ್ನು ನೀಡಲಾಗುತ್ತಿದೆ. ಹೆಚ್ಚಿನ ವಿವರಗಳಿಗೆ www.smlproductions.com, sml productions Facebook page, info@smlproductions.com ಅಥವಾ ಮೊಬೈಲ್ ಸಂಖ್ಯೆ 8867579595 ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು’ ಎಂದು ಚಿತ್ರತಂಡ ತಿಳಿಸಿದೆ. ಚಿತ್ರತಂಡ ಶೇರ್ ಮಾಡಿರುವ ಪೋಸ್ಟರ್ ಸಾಕಷ್ಟು ಗಮನ ಸೆಳೆಯುತ್ತಿದೆ. ಕತ್ತಲೆಯಲ್ಲಿ ನಿಂತಿರುವ ನಾಯಕ ಕ್ಯಾಮೆರಾಗೆ ಬೆನ್ನು ತೋರಿಸಿದ್ದು ಆತನ ಕೈಯಲ್ಲಿ ಹಿಂಡಿದುಕೊಂಡಿರುವ ಕತ್ತಿಯ ತುದಿಯಿಂದ ರಕ್ತ ಜಿನುಗುತ್ತಿದೆ. ಬ್ಲಾಕ್ ಎಂಡ್ ವೈಟ್ ನಲ್ಲಿ ಪೋಸ್ಟರ್ ನಲ್ಲಿ ಕೇವಲ ರಕ್ತ ಹಾಗೂ ಕತ್ತಿಯನ್ನು ಮಾತ್ರವೇ ಹೈಲೈಟ್ ಮಾಡಲಾಗಿದೆ. ಈ ಸಿನಿಮಾ ತಂಡದವರು ಹಂಚಿಕೊಂಡಿರುವ ಪೋಸ್ಟರ್​ ಗಮನ ಸೆಳೆಯುತ್ತಿದೆ. ಕತ್ತಲೆಯ ಹಿನ್ನೆಲೆಯಲ್ಲಿ ಹೀರೋ ನಿಂತಿದ್ದಾನೆ. ಕ್ಯಾಮೆರಾಗೆ ಬೆನ್ನು ತೋರಿಸಿ ನಿಂತಿರುವ ಆತನ ಕೈಯಲ್ಲಿ ಕತ್ತಿ ಇದೆ. ಆ ಕತ್ತಿಯಿಂದ ರಕ್ತ ಸುರಿಯುತ್ತಿದೆ. ಕಪ್ಪು ಬಿಳುಪಿನ ಪೋಸ್ಟರ್​ನಲ್ಲಿ ರಕ್ತ ಮಾತ್ರ ಕೆಂಪಾಗಿ ಹೈಲೈಟ್​ ಆಗಿದೆ. ಅಂತಿಮವಾಗಿ ಈ ಚಿತ್ರಕ್ಕೆ ಯಾವ ಟೈಟಲ್​ ಆಯ್ಕೆ ಆಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now