• January 1, 2026

ಲೈಂಗಿಕ ದೌರ್ಜನ್ಯ ಆರೋಪ: ನಟ ಕಮಲ್ ಆರ್ ಖಾನ್ ಬಂಧನ

ಕಳೆದ ಕೆಲ ದಿನಗಳ ಹಿಂದಷ್ಟೇ ಅವಹೇಳನಕಾರಿ ಟ್ವೀಟ್ ಮಾಡಿದ್ದ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ನಟ ಹಾಗೂ ಸ್ವಯಂ ವಿಮರ್ಶಕ ಕಮಲ್ ಆರ್ ಖಾನ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ ಎಸಗಿರುವ ಕಾರಣಕ್ಕೆ ಮತ್ತೆ ಪೊಲೀಸರು ಬಂಧಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. 2017ರಲ್ಲಿ ಕಮಲ್ ಆರ್ ಖಾನ್ ತಾವು ನಿರ್ಮಾಣ ಮಾಡುವ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಟಿಯೊಬ್ಬರಿಗೆ ನಂಬಿಸಿ ಮೋಸ ಮಾಡಿದ್ದಾರೆ ಎಂದು ನಟಿ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಮಲ್ ರನ್ನು ವಶಕ್ಕೆ ಪಡೆದುಕೊಂಡಿದ್ದು ಬಾಂದ್ರಾ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಶಿವಸೇನೆಯ ನಾಯಕರೊಬ್ಬರ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಮಲ್ ಖಾನ್ ರನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದರು. ಆಗಸ್ಟ್ 30ರ ವರೆಗೆ ನ್ಯಾಯಾಂಕ ಬಂಧನದಲ್ಲಿದ್ದ ಕಮಲ್ ರನ್ನು ಇದೀಗ ಮತ್ತೆ ಬಂಧಿಸಲಾಗಿದೆ. ನಟಿಗೆ ತಾನು ಪ್ರೊಡ್ಯೂಸರ್ ಎಂದು ಪರಿಚಯ ಮಾಡಿಕೊಂಡು ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದಾರಂತೆ. ಬಳಿಕ ಆಕೆಗೆ ಆಶ್ಲೀಲ ಮೆಸೇಜ್ ಮಾಡಲು ಆರಂಭಿಸಿದ್ದಾರೆ. ಅಲ್ಲದೆ ತನ್ನ ಬರ್ತಡೇ ಪಾರ್ಟಿಗೆ ಆಹ್ವಾನಿಸಿದ್ದು ಈ ಸಂದರ್ಭದಲ್ಲಿ ಜ್ಯೂಸ್ ನಲ್ಲಿ ಮತ್ತು ಭರಿಸುವ ವಸ್ತು ಬೆರೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ನಟಿ ದೂರು ನೀಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now