ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮತ್ತೊಮ್ಮೆ ಬಾಂಬ್ ಸಿಡಿಸಿದ ಚಿನ್ಮಯಿ ಶ್ರೀಪಾದ್: ಸಮಂತಾ ಪಾತ್ರಕ್ಕೆ ಡಬ್ಬಿಂಗ್ ಮಾಡಲಾರೆ ಎಂದ ಗಾಯಕಿ
ಕಳೆದ ಕೆಲ ಸಮಯದಿಂದ ಸಮಂತಾ ಹಾಗೂ ಚಿನ್ಮಯಿ ಮಧ್ಯೆ ಮನಸ್ತಾಪ ಉಂಟಾಗುತ್ತಿದೆ. ಮೇಲಿಂದ ಮೇಲೆ ಮನಸ್ತಾಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿನ್ಮಯಿ ಇಂಥದೊಂದು ದೃಡ ನಿರ್ಧರ ಕೈಗೊಂಡಿದ್ದಾರೆ. ಸಮಂತಾರ ಮುಂದಿನ ಸಿನಿಮಾಗಳಿಗೆ ವಾಯ್ಸ್ ನೀಡುವುದಿಲ್ಲ ಎಂದಿರುವ ಚಿನ್ಮಯಿ ಇನ್ನು ಮುಂದೆ ಅವರ ಜೊತೆ ಯಾವುದೇ ರೀತಿಯ ಕಾಟ್ಯಾಕ್ಟ್ ಕೂಡ ಇಟ್ಟುಕೊಳ್ಳುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಚಿನ್ಮಯಿ ಶ್ರೀಪಾದ್ ಧೃಡ ನಿರ್ಧಾರದಿಂದ ಸಮಂತಾ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸಿನಿಮಾ ರಂಗದ ಮಧ್ಯಸ್ಥಿಕೆಯಿಂದ ಚಿನ್ಮಯಿ ನಿರ್ಧಾರ ಬದಲಿಸುತ್ತಾರಾ ಅನ್ನೋದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.
