ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಲೈಗರ್ ಸಿನಿಮಾದ ಸೋಲು: ಜನರ ಕಣ್ಣಿಂದ ದೂರವಾಗಲು ನಿರ್ಧರಿಸಿದ ಚಾರ್ಮಿ ಕೌರ್
ಲೈಗರ್ ಸಿನಿಮಾದ ಸೋಲಿನಿಂದ ನಟಿ ಅನನ್ಯಾ ಪಾಂಡೆ ಕೂಡ ಆಫರ್ ಕೈ ತಪ್ಪಿಸಿಕೊಂಡಿದ್ದಾರೆ. ಜೂನಿಯರ್ ಎನ್ ಟಿ ಆರ್ ನಟನೆಯ 30ನೇ ಸಿನಿಮಾದಲ್ಲಿ ಅನನ್ಯಾ ಪಾಂಡೆ ನಟಿಸಬೇಕಿತ್ತು.ಆದರೆ ಲೈಗರ್ ಚಿತ್ರದಲ್ಲಿ ಆಕೆಯ ನಟನೆ ನೋಡಿ ಬೆಚ್ಚಿ ಬಿದ್ದ ನಿರ್ದೇಶಕರು ಜೂನಿಯರ್ ಎನ್ ಟಿ ಆರ್ ಸಿನಿಮಾದಿಂದ ಕೈ ಬಿಟ್ಟಿದ್ದಾರೆ ಎನ್ನಲಾಗುತ್ತಿದೆ.
ಲೈಗರ್ ಸಿನಿಮಾ ಭಾರೀ ಸೋಲು ಕಂಡಿರುವ ಹಿನ್ನೆಲೆಯಲ್ಲಿ ನಿರ್ಮಾಪಕಿ ಚಾರ್ಮಿ ಕೌರ್ ಸೋಷಿಯಲ್ ಮೀಡಿಯಾಗೆ ಕೆಲ ಸಮಯ ವಿರಾಮ ಘೋಷಿಸಿದ್ದಾರೆ. ಚಿಲ್ ಗೈಸ್! ಸ್ವಲ್ಪ ವಿರಾಮ ತೆಗೆದುಕೊಳ್ಳುತ್ತೇನೆ. @PuriConnects ಮತ್ತೆ ಪುಟಿದೇಳುತ್ತಾರೆ. ಮತ್ತೆ ದೊಡ್ಡ ಹಾಗೂ ಉತ್ತಮ… ಅಲ್ಲಿಯವರೆಗೂ ಬದುಕಿ ಮತ್ತು ಬದುಕಲು ಬಿಡಿ ಎಂದು ಚಾರ್ಮಿ ಟ್ವೀಟ್ ಮಾಡಿದ್ದಾರೆ.
