ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪ್ರಕಾಶ್ ರಾಜ್ ಫಸ್ಟ್ ಲುಕ್ ಅನಾವರಣ ಮಾಡಿದ ಪೊನ್ನಿಯನ್ ಸೆಲ್ವನ್ ಚಿತ್ರತಂಡ
ಪೋಸ್ಟ್ ನಲ್ಲಿ “ಪ್ರತಿಯೊಂದು ಗುಲಾಬಿಗೂ ಅದರ ಮುಳ್ಳುಗಳಿವೆ. ಚಕ್ರವರ್ತಿ, ರಾಣಿ ತಾಯಿ ಮತ್ತು ಎಲ್ಲವನ್ನೂ ಬಯಸುವ ಮಗ! ಗ್ರ್ಯಾಂಡ್ ಆಡಿಯೊ ಮತ್ತು ಟ್ರೇಲರ್ ಬಿಡುಗಡೆಗೆ 2 ದಿನಗಳು” ಎಂದು ಬರೆಯಲಾಗಿದೆ.
‘ಬಾಹುಬಲಿ’, ‘ಆರ್ಆರ್ಆರ್’, ‘ಕೆಜಿಎಫ್’ ಬಳಿಕ ಭಾರತದಾದ್ಯಂತ ಬಹುನಿರೀಕ್ಷೆ ಮೂಡಿಸಿರುವ ‘ಪೊನ್ನಿಯಿನ್ ಸೆಲ್ವನ್ 1’ ಚಿತ್ರವನ್ನು ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನ ಮಾಡಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಬರೆದಿರುವ ‘ಪೊನ್ನಿಯಿನ್ ಸೆಲ್ವನ್’ ಎಂಬ ಐತಿಹಾಸಿಕ ಪುಸ್ತಕವನ್ನು ಆಧರಿಸಿ ‘ಪೊನ್ನಿಯಿನ್ ಸೆಲ್ವನ್ 1 ಸಿನಿಮಾ ತಯಾರಿಸಲಾಗುತ್ತಿದೆ. 9ನೇ ಶತಮಾನದಲ್ಲಿ ದಕ್ಷಿಣ ಭಾರತವನ್ನು ಆಳಿದ ರಾಜ ರಾಜ ಚೋಳನ ಜೀವನಗಾಥೆಯೇ ಕಥೆಯನ್ನು ಪೊನ್ನಿಯಲ್ ಸೆಲ್ವನ್ ಸಿನಿಮಾ ಹೊಂದಿದ್ದು , ಸುಮಾರು 500 ಕೋಟಿ ರೂಪಾಯಿ ಬಜೆಟ್ನಲ್ಲಿ ಚಿತ್ರ ನಿರ್ಮಿಸಲಾಗುತ್ತಿದೆ.Every rose has its thorns. The Emperor, the Queen Mother and the Son who wants it all!
— Lyca Productions (@LycaProductions) September 4, 2022
Meet @prakashraaj as Sundara Chozhar, Jayachitra as Sembiyan Maadevi and @actorrahman as Madhurantakan!
2 days to go for the Grand audio and trailer launch of #PS1!! #PonniyinSelvan pic.twitter.com/VnXjRHUDR4
