• March 15, 2026

ರಾಜಕೀಯಕ್ಕೆ ಸೇರಿ ಎಂದವರಿಗೆ ಖಡಕ್ ತಿರುಗೇಟು ಕೊಟ್ಟ ಕಾಫಿ ನಾಡು ಚಂದು: ವೈರಲ್ ಆಯ್ತು ವೀಡಿಯೋ

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಕಾಫಿ ನಾಡು ಚಂದು ಅವರ ಜನಪ್ರಿಯತೆ ದಿನೇ ದಿನೇ ಹೆಚ್ಚುತ್ತಿದೆ. ಸಾಕಷ್ಟು ಮಂದಿ ಅವರ ಬಳಿ ತೆರಳಿ ಬರ್ತಡೇ ವಿಶ್ ಮಾಡಿಸುತ್ತಿದ್ದಾರೆ. ಜೊತೆಗೆ ಹಲವು ಕಡೆಗಳಲ್ಲಿ ಕಾಫಿ ನಾಡು ಚಂದು ಅವರಿಗೆ ಸನ್ಮಾನ ಮಾಡಲಾಗುತ್ತಿದೆ. ಇದೀಗ ಚಂದು ರಾಜಕೀಯಕ್ಕೆ ಎಂಟ್ರಿಕೊಡಿ ಎಂದು ಕೆಲವರು ಸಲಹೆ ನೀಡುತ್ತಿದ್ದು ಅಂಥವರಿಗೆ ಚಂದು ತಿರುಗೇಟು ನೀಡಿದ್ದಾರೆ. ನಾನು ಪುನೀತ್ ಅಣ್ಣ, ಶಿವಣ್ಣನ ಅಭಿಮಾನಿ ಎನ್ನುತ್ತಲೇ ಬರ್ತಡೇ ಹಾಡು ಹಾಡಿ ಸಖತ್ ಫೇಮಸ್ ಆದ ಬಂದು ಬಿಗ್ ಬಾಸ್ ಗೆ ಬರ್ತಾರೆ ಅಂತಲೇ ಹೇಳಲಾಗಿತ್ತು. ಆದ್ರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಸಾಕಷ್ಟು ಮಂದಿ ಕಾಫಿ ನಾಡು ಚಂದುಗೆ ರಾಜಕೀಯಕ್ಕೆ ಎಂಟ್ರಿಕೊಡಿ ಎನ್ನುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರು ಚಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ‘ನೀವು ರಾಜಕೀಯಕ್ಕೆ ನಿಂತುಕೊಳ್ಳಬಹುದಿತ್ತಲ್ಲ ಅಂತ ಯಾರೋ ಒಬ್ಬರು ಹೇಳಿದ್ರು. ನನಗೆ ಅದರಲ್ಲಿ ಇಂಟರೆಸ್ಟ್​ ಇಲ್ಲ. ಯಾಕೆಂದರೆ ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ ಇದಾವೆ. ಓಹೋ ಚಂದು ಕಾಂಗ್ರೆಸ್​ಗೆ ನಿಂತುಕೊಂಡು, ಬಿಜೆಪಿಗೆ ನಿಂತುಕೊಂಡ ಅಂತ ಜನರು ಹೇಳೋದು ಬೇಡ. ನನಗೆ ಈಗ ಇರುವ ಲೈಫ್​ ಚೆನ್ನಾಗಿದೆ. ರಾಜಕೀಯದ ಬಗ್ಗೆ ಮಾತಾಡೋಕೆ ನಾನು ರಾಜಕಾರಣಿ ಅಲ್ಲ. ದೇವಸ್ಥಾನದ ಬಗ್ಗೆ ಮಾತಾಡೋಕೆ ಪೂಜಾರಿನೂ ಅಲ್ಲ. ಪಾಠ ಮಾಡೋಕೆ ನಾನು ಮೇಷ್ಟ್ರು ಅಲ್ಲ. ನಾನು ಪುನೀತಣ್ಣ, ಶಿವಣ್ಣ ಅವರ ಅಭಿಮಾನಿ’ ಎಂದು ಚಂದು ಹೇಳಿರುವ ವಿಡಿಯೋ ವೈರಲ್​ ಆಗಿದೆ. ಚಿಕ್ಕಮಗಳೂರಿನಲ್ಲಿ ಆಟೋ ಓಡಿಸಿಕೊಂಡು ಜೀವನ ನಡೆಸುತ್ತಿರುವ ಚಂದುಗೆ ಇನ್ ಸ್ಟಾಗ್ರಾಂನಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಬರ್ತಡೇ ಸಾಂಗ್ ಹೇಳುತ್ತಲೇ ಫೇಮಸ್ ಆದ ಚಂದು ಜನಪರ ಕಾರ್ಯಗಳನ್ನು ಮಾಡುತ್ತಲೆ ಖ್ಯಾತಿ ಘಳಿಸುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now