• March 15, 2026

ಲೇಡಿ ಸೂಪರ್ ಸ್ಟಾರ್ ನಯನತಾರಾ ನಿರ್ಧರದಿಂದ ಬೇಸರಕೊಂಡ ಅಭಿಮಾನಿಗಳು

ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಮದುವೆಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ನಿರ್ದೇಶಕ ವಿಘ್ನೇಶ್ ಶಿವನ್ ಕೈ ಹಿಡಿದ ನಯನತಾರಾ ಸಿನಿಮಾಗಳ ಜೊತೆಗೆ ವೈಯಕ್ತಿಯ ಜೀವನಕ್ಕೂ ಟೈಂ ನೀಡ್ತಿದ್ದಾರೆ. ಆದ್ರೆ ಇದೀಗ ಲೇಡಿ ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಶಾಕ್ ನೀಡುವಂತ ಸುದ್ದಿಯೊಂದು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ನಟಿ ನಯನತಾರಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಆಕೆಯ ಸಿನಿಮಾಗಾಗಿ ಕಾದು ಕೂರ್ತಿರ್ತಾರೆ. ಆದ್ರೆ ಇದೀಗ ನಯನತಾರಾ ಫ್ಯಾನ್ಸ್ ಸುದ್ದಿಯೊಂದನ್ನು ಕೇಳಿ ಬೇಸರಕೊಂಡಿದ್ದಾರೆ. ಹೌದು. ನಯನತಾರಾ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳ್ತಾರೆ ಅನ್ನೋ ಸುದ್ದಿ ಕೇಳಿ ಬಂದಿದೆ. ನಟನೆಯ ಜೊತೆಗೆ ವೈಯಕ್ತಿಯ ಜೀವನಕ್ಕೂ ಸಮಯ ನೀಡುತ್ತಿರುವ ನಯನತಾರಾ ಇನ್ನು ಮುಂದೆ ಫುಲ್ ಟೈಂ ಖಾಸಗಿ ಜೀವನದತ್ತ ಗಮನ ಹರಿಸಲು ನಿರ್ಧರಿಸಿದ್ದಾರಂತೆ. ಮದುವೆಗೂ ಮುಂಚೆ ಒಪ್ಪಿಕೊಂಡಿರುವ ಸಿನಿಮಾ ಮುಗಿದ ಬಳಿಕ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಸರಿಯಲು ನಯನತಾರಾ ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ನಯನತಾರಾ ಶಾರುಖ್ ಖಾನ್ ಜತೆ `ಜವಾನ್’, ಪೃಥ್ವಿರಾಜ್ ಜತೆ `ಗೋಲ್ಡ್’, ಚಿರಂಜೀವಿ ಜತೆಯಲಿ `ಗಾಡ್ ಫಾದರ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಪ್ರಾಜೆಕ್ಟ್ ಮುಗಿದ ಬಳಿಕ ನಯನತಾರಾ ನಟನೆಗೆ ಫುಲ್ ಸ್ಟಾಪ್ ಇಡಲಿದ್ದಾರಂತೆ. ಒಟ್ನಲ್ಲಿ ನಯನತಾರಾ ಅಭಿಮಾನಿಗಳು ಆಕೆಯ ನಿರ್ಧರದಿಂದ ಸಖತ್ ಬೇಸರಕೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now