ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಶಿವರಾಜ್ ಕುಮಾರ್ ಮನೆಗೆ ಭೇಟಿ ನೀಡಿದ ಜೆನಿಲಿಯಾ, ರಿತೇಶ್
ಮದುವೆಯ ಬಳಿಕ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದ ಜೆನಿಲಿಯಾ ಇದೀಗ ಮತ್ತೆ ಕಂಬ್ಯಾಕ್ ಮಾಡಿದ್ದಾರೆ. ಜನಾರ್ದನ್ ರೆಡ್ಡಿ ಪುತ್ರ ಕಿರೀಟಿ ಸಿನಿಮಾದಲ್ಲಿ ಪವರ್ ಫುಲ್ ಪಾತ್ರದಲ್ಲಿ ನಟಿಸುವ ಮೂಲಕ ಮತ್ತೆ ಬಣ್ಣದ ಬದುಕಿಗೆ ಕಾಲಿಟ್ಟಿದ್ದಾರೆ.
ಇನ್ನೂ ಹೆಸರಿಡದ ಕಿರೀಟಿ ನಟನೆಯ ಸಿನಿಮಾದ ಶೂಟಿಂಗ್ ಬೆಂಗಳೂರಿನಲ್ಲಿ ನಡೆಯುತ್ತಿದೆ. ಎರಡು ದಿನಗಳ ಹಿಂದೆ ಸೆಟ್ ಗೆ ಭೇಟಿ ನೀಡಿದ್ದ ಶಿವರಾಜ್ ಕುಮಾರ್ ಚಿತ್ರತಂಡದ ಜೊತೆ ಸಮಯ ಕಳೆದಿದ್ದರು, ಅಲ್ಲದೆ ಜೆನಿಲಿಯಾ ದಂಪತಿಗಳನ್ನು ಮನೆಗೆ ಆಹ್ವಾನಿಸಿದ್ದರು. ಹೀಗಾಗಿ ಜೆನಿಲಿಯಾ ದಂಪತಿಗಳು ಶಿವಣ್ಣನ ಮನೆಗೆ ಭೇಟಿ ನೀಡಿದ್ದು ಶಿವಣ್ಣ, ಗೀತಾಕ್ಕ ಹಾಗೂ ಮಗಳ ಜೊತೆ ಕೆಲ ಸಮಯ ಕಳೆದಿದ್ದಾರೆ.
