ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿಜಯ್ ದೇವರಕೊಂಡ ಸಿನಿಮಾದಿಂದ ಹಿಂದೆ ಸರಿದ ನಿರ್ಮಾಪಕರು: ನಿಂತೇ ಹೋಯ್ತು ಪುರಿ-ದೇವರಕೊಂಡ ಜನ ಗಣ ಮನ
ಮೊದಲಿಗೆ ಜನ ಗಣ ಮನ ಸಿನಿಮಾದಲ್ಲಿ ಮಹೇಶ್ ಬಾಬು ನಟಿಸ್ತಾರೆ ಎನ್ನಲಾಗಿತ್ತು. ಆದರೆ ಈ ಚಿತ್ರಕ್ಕೆ ಮಹೇಶ್ ಬಾಬು ಗ್ರೀನ್ ಸಿಗ್ನಲ್ ನೀಡಲಿಲ್ಲ.ಕೆಜಿಎಫ್ ಸಕ್ಸಸ್ ಬಳಿಕ ಯಶ್ ಚಿತ್ರದಲ್ಲಿ ನಟಿಸ್ತಾರೆ ಎನ್ನಲಾಗಿತ್ತು. ಆದರೆ ಅದು ಆಗಲಿಲ್ಲ.ಕೊನೆಗೆ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡಲು ನಿರ್ಧರಿಸಿದ ಸಿನಿಮಾದ ಮುಹೂರ್ತ ಕೂಡ ನೆರವೇರಿಸಲಾಗಿತ್ತು.
ಕೆಲವೊಂದು ಮೂಲಗಳ ಪ್ರಕಾರ ಲೈಗರ್ ಸಿನಿಮಾ ಸೋತ ಕಾರಣದಿಂದ ಜನ ಗಣ ಮನ ಸಿನಿಮಾ ನಿಂತು ಹೋಗಿದೆಯಂತೆ. ಬಹು ಕೋಟಿ ವೆಚ್ಚದಲ್ಲಿ ಜನ ಗಣ ಮನ ಸಿನಿಮಾ ತಯಾರಾಗಬೇಕಿತ್ತು. ಆದರೆ ಅಷ್ಟು ಬಂಡಾವಳ ವಿಜಯ್ ದೇವರಕೊಂಡ ಸಿನಿಮಾಗೆ ಹಾಕಿದರೆ ಅದು ವಾಪಸ್ ಬರುವ ಸಾಧ್ಯತೆ ಕಮ್ಮಿ ಎನ್ನುವ ಕಾರಣಕ್ಕೆ ನಿರ್ಮಾಪಕರು ಹಿಂದೆ ಸರಿದಿದ್ದಾರಂತೆ.
ಲೈಗರ್ ಸಿನಿಮಾದ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದ ಸಂದರ್ಭದಲ್ಲಿಯೇ ಜನ ಗಣ ಮನ ಸಿನಿಮಾಗೆ ಅದ್ದೂರಿ ಚಾಲನೆ ಸಿಕ್ಕಿತ್ತು. ಮುಂಬೈನಲ್ಲಿ ಅದ್ದೂರಿಯಾಗಿ ಸಿನಿಮಾದ ಮುಹೂರ್ತ ಕೂಡ ಆಚರಿಸಲಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಮಾಡಬೇಕು ಎಂದು ಕೊಂಡಿದ್ದವ್ರು ಇದೀಗ ಲೈಗರ್ ಸಿನಿಮಾದಿಂದಾಗಿ ಜನ ಗಣ ಮನ ಕೈ ಬಿಡುವಂತೆ ಆಗಿದೆ.
