• March 14, 2026

ಕೊನೆಯ ಕ್ಷಣದಲ್ಲಿ ಬ್ರಹ್ಮಾಸ್ತ್ರ ಚಿತ್ರದ ಪ್ರೀರಿಲೀಸ್ ಈವೆಂಟ್ ರದ್ದು: ಕಾರಣವೇನು ಗೊತ್ತಾ?

ರಿಯಲ್ ಲೈಫ್ ನಲ್ಲಿ ಒಂದಾಗಿರುವ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ತೆರೆಗೆ ಬರೋಕೆ ಇನ್ನೇನ್ನೂ ಕೆಲವೇ ಕೆಲವು ದಿನಗಳ ಮಾತ್ರವೇ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ದೇಶದ ಪ್ರಮುಖ ನಗರಗಳಲ್ಲಿ ಅದ್ದೂರಿಯಾಗಿ ಚಿತ್ರದ ಪ್ರಮೋಷನ್ ಕೆಲಸಗಳನ್ನು ಮಾಡುತ್ತಿದೆ. ಬ್ರಹ್ಮಾಸ್ತ್ರ ತೆರೆಗೆ ಬರಲು ಕೆಲವೇ ದಿನಗಳು ಭಾಕಿ ಇರುವ ಹಿನ್ನೆಲೆಯಲ್ಲಿ ನಿನ್ನೆ ಚಿತ್ರತಂಡ ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಜೂನಿಯರ್ ಎನ್ ಟಿ ಆರ್ ರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆದರೆ ಕೊನೆ ಘಳಿಗೆಯಲ್ಲಿ ಕಾರ್ಯಕ್ರಮ ಕ್ಯಾನ್ಸಲ್ ಆಗಿದೆ. ಕಾರ್ಯಕ್ರಮ ನೋಡಬೇಕು, ಆಲಿಯಾ ಭಟ್, ರಣಬೀರ್, ಜೂನಿಯರ್ ಎನ್ ಟಿ ಆರ್ ನೋಡಬೇಕು ಎಂದು ಸಾಕಷ್ಟು ಅಭೀಮಾನಿಗಳು ಆಗಮಿಸಿದ್ದರು. ನೆಚ್ಚಿನ ನಟ ನಟಿಯನ್ನು ನೋಡಬೇಕು ಎಂದು ಕಾದು ಕೂತಿದ್ದ ಅಭಿಮಾನಿಗಳು ಕೊನೆಗೆ ಸೈಲೆಂಟ್ ಆಗಿ ಮನೆ ಕಡೆ ಹೆಜ್ಜೆ ಹಾಕಿದ್ದಾರೆ. ಕಾರ್ಯಕ್ರಮ ರದ್ದಾದ ಹಿನ್ನೆಲೆಯಲ್ಲಿ ಜೂನಿಯರ್ ಎನ್ ಟಿ ಆರ್, ಆಲಿಯಾ ಭಟ್, ರಣ್​​ಬೀರ್ ಕಪೂರ್, ನಾಗಾರ್ಜುನ್, ಮೌನಿರಾಯ್, ನಿರ್ದೇಶಕ ರಾಜಮೌಳಿ, ನಿರ್ಮಾಪಕ ಕರಣ್ ಜೋಹರ್ ಸೇರಿದಂತೆ ಚಿತ್ರತಂಡ Park Hyatt ಹೋಟೆಲ್​ನಲ್ಲಿ ಸುದ್ದಿಗೋಷ್ಟಿ ನಡೆಸಿ ಕಾರ್ಯಕ್ರಮ ರದ್ದಾಗಿದ್ದರ ಬಗ್ಗೆ ಮತ್ತು ಬ್ರಹ್ಮಾಸ್ತ್ರ ಸಿನಿಮಾ ಬಗ್ಗೆ ಮಾತನಾಡಿದರು. ಹೆಚ್ಚಿನ ಭದ್ರತಾ ವ್ಯವಸ್ಥೆ ಸಾಧ್ಯವಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿತು. ಗಣೇಶೋತ್ಸವ, ರಾಜಕೀಯ ಕಾರ್ಯಕ್ರಮವೊಂದರ ಸಲುವಾಗಿ ಭದ್ರತೆಗೆ ಪೊಲೀಸರು ನಿಯೋಜನೆಗೊಂಡಿದ್ದರು. ಹಾಗಾಗಿ ನಮಗೆ ಹೆಚ್ಚಿನ ಭದ್ರತಾ ವ್ಯವಸ್ಥೆ ಪೂರೈಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದರು. ಹೀಗಾಗಿ ನಾವು ಅವರಿಗೆ ಸಹಕಾರ ನೀಡಿದ್ದೇವೆ. ಈ ಹಿನ್ನೆಲೆಯಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಪ್ರೀರಿಲೀಸ್ ಈವೆಂಟ್ ಕ್ಯಾನ್ಸಲ್ ಆಗಿದ್ದು ಈ ಸಣ್ಣ ವೇದಿಕೆಯಿಂದ ನಿಮ್ಮೊಂದಿಗೆ ಮಾತನಾಡುತ್ತಿದ್ದೇವೆ ಎಂದು ಜೂನಿಯರ್ ಎನ್ ಟಿ ಆರ್ ಹೇಳಿದರು. ಬ್ರಹ್ಮಾಸ್ತ್ರ ಪ್ರೀ ರಿಲೀಸ್ ಈವೆಂಟ್ ವ್ಯವಸ್ಥೆಯನ್ನು ಅತ್ಯುತ್ತಮವಾಗಿ ಮಾಡಿದ್ದರು. ತಂಡವು ತುಂಬಾ ಶ್ರಮಿಸಿತ್ತು. ಆದರೆ ಅದು ಅಂದುಕೊಂಡಂತೆ ಆಗಲಿಲ್ಲ. ಕರಣ್​ ಜೋಹರ್​ ಸರಿಯಾಗಿ ಗಣೇಶ ಪೂಜೆ ಮಾಡುತ್ತಿಲ್ಲ, ಹಾಗಾಗಿ ಹೀಗಾಯಿತೇನೋ ಎಂದು ನಿರ್ದೇಶಕ ರಾಜಮೌಳಿ ತಮಾಷೆ ಮಾಡಿದರು. ಬ್ರಹ್ಮಾಸ್ತ್ರ ಸಿನಿಮಾ ಇದೇ ಸೆಪ್ಟೆಂಬರ್ 9ರಂದು ಹಿಂದಿ,ತಮಿಳು, ತೆಲುಗು,ಕನ್ನಡ,ಮಲಯಾಳಂ ಸೇರಿ ಒಟ್ಟು ಐದು ಭಾಷೆಯಲ್ಲಿ ತೆರೆಗೆ ಬರ್ತಿದೆ. ಸದ್ಯ  ಬ್ರಹ್ಮಾಸ್ತ್ರಕ್ಕೂ ಬಾಯ್ಕಾಟ್ ಬಿಸಿ ತಾಗಿದ್ದು ಸಿನಿಮಾ ಅದೆಷ್ಟರ ಮಟ್ಟಿಗೆ ಸಕ್ಸಸ್ ಕಾಣುತ್ತೆ ಅನ್ನೊದನ್ನು ಕಾದು ನೋಡಬೇಕಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now