• March 15, 2026

ಕಿರೀಟಿ ಸಿನಿಮಾ ಸೆಟ್ ಗೆ ಸಪ್ರೈಸ್ ವಿಸಿಟ್ ಮಾಡಿದ ಹ್ಯಾಟ್ರಿಕ್ ಹೀರೋ

ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟಿರೋದು ಗೊತ್ತೇ ಇದೆ. ಟೀಸರ್ ನಿಂದಲೇ ಗಾಂಧಿನಗರದಲ್ಲಿ ಭರವಸೆ ಮೂಡಿಸಿರುವ ಕಿರೀಟಿ ಸದ್ಯ ಇನ್ನೂ ಹೆಸರಿಡದ ಚೊಚ್ಚಲ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಾಕಷ್ಟು ಅದ್ದೂರಿಯಾಗಿ ಮುಹೂರ್ತ ನೆರವೇರಿಸಿದ್ದ ಚಿತ್ರತಂಡ ಯಾವುದೇ ವಿರಾಮ ತೆಗೆದುಕೊಳ್ಳದೆ ಶೂಟಿಂಗ್ ನಲ್ಲಿ ತೊಡಗಿಕೊಂಡಿದೆ. ಈಗಾಗ್ಲೆ ಆಲ್ ಮೋಸ್ಟ್ ಚಿತ್ರದ ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ಮಧ್ಯೆ ಸಿನಿಮಾ ತಂಡದಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಕಿಕೀಟಿ ನಟನೆಯ ಚೊಚ್ಚಲ ಸಿನಿಮಾದ ಶೂಟಿಂಗ್ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ನಲ್ಲಿ ನಡೆಯುತ್ತಿದೆ. ಈ ವೇಳೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾ ಸೆಟ್ ಗೆ ಭೇಟಿ ನೀಡಿದ್ದು ಸಾಕಷ್ಟು ಸಮಯ ಕಳೆದಿದ್ದಾರೆ. ಶಿವಣ್ಣ ಸೆಟ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಿರೀಟಿ ಹಾಗೂ ಜೆನಿಲಿಯಾರ ಚಿತ್ರೀಕರಣ ನಡೆಯುತ್ತಿದೆ. ಈ ವೇಳೆ ಚಿತ್ರತಂಡದೊಂದಿಗೆ ಕೆಲ ಸಮಯ ಕಳೆದ ಶಿವಣ್ಣ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಅಂದ ಹಾಗೆ ಶಿವರಾಜ್ ಕುಮಾರ್ ಹಾಗೂ ಜೆನಿಲಿಯಾ ಸತ್ಯ ಇನ್ ಲವ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಇದೇ ತಿಂಗಳು 29ರಂದು ಕಿರೀಟಿ ಹುಟ್ಟುಹಬ್ಬವಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಟೈಟಲ್ ಅನಾವರಣವಾಗಲಿದೆ. ಅಂದು ವಿಡಿಯೋ ಝಲಕ್ ಮೂಲಕ ಚಿತ್ರದ ಶೀರ್ಘಿಕೆ ಘೋಷಿಸಲು ಚಿತ್ರತಂಡ ಮುಂದಾಗಿದೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ವಾರಾಹಿ ಚಲನ ಚಿತ್ರಂ’ ಮೂಲಕ ಅದ್ದೂರಿ ಬಜೆಟ್​ನಲ್ಲಿ ಮೂಡಿಬರುತ್ತಿರುವ ಸಿನಿಮಾವನ್ನು ‘ಮಯಾಬಜಾರ್’ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಅವರ ‘ಪುಷ್ಪ’ ಸಿನಿಮಾ ಮೂಲಕ ಸೆನ್ಸೇಷನ್​ ಕ್ರಿಯೇಟ್​ ಮಾಡಿರುವ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಕಿರೀಟಿಯ ಈ ಚೊಚ್ಚಲ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now