• June 3, 2026

ಅತಿ ಹೆಚ್ಚು ಟ್ರೋಲ್ ಗೆ ಒಳಗಾದ ನಟಿ ಮಹಾಲಕ್ಷ್ಮೀ ನಿರ್ಮಾಪಕ ರವೀಂದರ್: ಕ್ಯಾರೇ ಎನ್ನದ ನ್ಯೂ ಮ್ಯಾರೀಟ್ ಕಪಲ್ಸ್

ಕಳೆದ ಎರಡು ದಿನಗಳ ಹಿಂದೆ ತಿರುಪತಿಯಲ್ಲಿ ಹಸೆಮಣೆ ಏರಿದ ತಮಿಳು ನಟಿ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಸಖತ್ ಟ್ರೋಲ್ ಗೆ ಒಳಗಾಗುತ್ತಿದ್ದಾರೆ. ಈ ನವ ಜೋಡಿಗಳನ್ನು ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಆದ್ರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಜೋಡಿ ಹಕ್ಕಿಗಳು ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ನಟಿ ಹಾಗೂ ನಿರೂಪಕಿಯಾಗಿರುವ ಮಹಾಲಕ್ಷ್ಮೀ ಸಾಕಷ್ಟು ಸುಂದರವಾಗಿದ್ದು ಸಖತ್ ಸ್ಲೀಮ್ ಆಗಿದ್ದಾರೆ. ಆದರೆ ಮಹಾಲಕ್ಷ್ಮೀ ಕೈ ಹಿಡಿದಿರುವ ವರ ರವೀಂದರ್ ಮಹಾಲಕ್ಷ್ಮೀಗಿಂತ ನಾಲ್ಕು ಪಟ್ಟು ದಪ್ಪಗಿದ್ದಾರೆ. ಹೀಗಾಗಿ ಟ್ರೋಲಿಗರು ನಾನಾ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಸಾಕಷ್ಟು ಮಂದಿ ಅಪಹಾಸ್ಯ ಮಾಡುತ್ತಿದ್ದರೆ ಮತ್ತೊಂದಷ್ಟು ಮಂದಿ ನವ ಜೋಡಿಗಳಿಗೆ ಶುಭ ಹಾರೈಸುತ್ತಿದ್ದಾರೆ. ವೈವಾಹಿಕ ಜೀವನ ಸುಂದರವಾಗಿರಲಿ, ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ ಎನ್ನುತ್ತಿದ್ದಾರೆ. ಆದ್ರೆ ಯಾರೇ ಏನೇ ಟ್ರೋಲ್ ಮಾಡಿದ್ರು ಈ ಜೋಡಿಗಳು ಮಾತ್ರ ವೈವಾಹಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಮಹಾಲಕ್ಷ್ಮೀ ಹಾಗೂ ರವೀಂದರ್ ಇಬ್ಬರಿಗೂ ಇದು ಎರಡನೇ ಮದುವೆ. ಇಬ್ಬರು ಡಿವೋರ್ಸ್ ಪಡೆದುಕೊಂಡು ಎರಡನೇ ಮದುವೆಯಾಗಿದ್ದಾರೆ. ಇಬ್ಬರಿಗೂ ಇದು ಎರಡನೇ ಮದುವೆ ಆದ ಕಾರಣವು ಕೂಡ ಟ್ರೋಲ್ ಗೆ ಆಹಾರವಾಗಿದೆ. ಅಲ್ಲದೇ ಮಹಾಲಕ್ಷ್ಮೀ, ರವೀಂದರ್ ಕೈ ಹಿಡಿದಿರುವುದಕ್ಕೆ ಹಣದ ದಾಹವೂ ಕಾರಣವಾಗಿದೆ ಎಂದು ಕಾಮೆಂಟ್ ಮಾಡ್ತಿದ್ದಾರೆ. ಆದ್ರೆ ಇದ್ಯಾವುದಕ್ಕೂ ನವ ಜೋಡಿಗಳು ಕಾಮೆಂಟ್ ಮಾಡದೆ ತಮ್ಮಷ್ಟಕ್ಕೆ ತಾವಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now