ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಲೈಗರ್ ಸಿನಿಮಾದ ಬಳಿಕ ಕೈತಪ್ಪಿದ ಆಫರ್: ಸ್ಟಾರ್ ನಟನ ಸಿನಿಮಾದಿಂದ ಅನನ್ಯಾ ಪಾಂಡೆ ಔಟ್
ಬಾಲಿವುಡ್ ನಟ ಚಂಕಿ ಪಾಂಡೆ ಪುತ್ರ ಅನನ್ಯಾ ಪಾಂಡೆಗೆ ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಸಾಕಷ್ಟು ಆಫರ್ ಗಳು ಬರುತ್ತಿವೆ. ಆದರೆ ಲೈಗರ್ ಸಿನಿಮಾದ ನಟನೆ ನೋಡಿ ಸಿಕ್ಕ ಆಫರ್ ಗಳನ್ನು ಅನನ್ಯಾ ಕಳೆದುಕೊಳ್ಳುತ್ತಿದ್ದಾರೆ. ರ್ ಸಿನಿಮಾದಲ್ಲಿ ನಾಯಕಿಯ ಪಾತ್ರ ಸಪ್ಪೆಯಾಗಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಅಲ್ಲದೆ ಲೈಗರ್ ಸಿನಿಮಾದಲ್ಲಿ ನನ್ನ ಕರಿಯರ್ ಮುಂದುವರೆಸಲು ಹಾಲಿವುಡ್ ಗೆ ಹೋಗುತ್ತೇನೆ ಎಂದು ಚಿತ್ರದ ನಟಿ ಹೇಳಿರುವ ಡೈಲಾಗ್ ಸಾಕಷ್ಟು ಟ್ರೋಲ್ ಗೆ ಒಳಗಾಗಿತ್ತು.ಈ ಕಾರಣಕ್ಕೆ ಅನನ್ಯಾಗೆ ಚಾನ್ಸ್ ನೀಡಲು ನಿರ್ಮಾಪಕರು ಹಿಂದೇಟು ಹಾಕಿದ್ದಾರೆ.
ಜ್ಯೂ.ಎನ್ಟಿಆರ್ ನಟನೆಯ ಮುಂದಿನ ಸಿನಿಮಾದಲ್ಲಿ ನಟಿಸಲು ಅನನ್ಯಾ ಪಾಂಡೆಗೆ ನಿರ್ಮಾಪಕರು ಆಫರ್ ನೀಡಿದ್ದರು. ‘ಲೈಗರ್’ ರಿಸಲ್ಟ್ ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುವ ಆಲೋಚನೆಯಲ್ಲಿ ಅನನ್ಯಾ ಪಾಂಡೆ ಇದ್ದರು. ಈಗ ‘ಲೈಗರ್’ ಚಿತ್ರದಲ್ಲಿ ಅನನ್ಯಾ ಆ್ಯಕ್ಟಿಂಗ್ ನೋಡಿ ನಿರ್ಮಾಪಕರೇ ಹಿಂದೆ ಸರಿದಿದ್ದಾರೆ. ಅವರನ್ನು ಚಿತ್ರದಿಂದ ಹೊರಗಿಡುವ ನಿರ್ಧಾರಕ್ಕೆ ನಿರ್ಮಾಪಕರು ಬಂದಿದ್ದಾರೆ ಎನ್ನಲಾಗಿದೆ.
