ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
49ರ ಹರೆಯದಲ್ಲೂ ಚಿರ ಯುವಕರು ನಾಚುವಂತಿದೆ ಸುದೀಪ್ ಫಿಟ್ ನೆಸ್
ಬಾಲ್ಯದಲ್ಲಿಯೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸುದೀಪ್ ಗೆ ನಟ ಪುನೀತ್ ರಾಜ್ ಕುಮಾರ್ ಜೊತೆ ಉತ್ತಮ ಬಾಂದವ್ಯ ಹೊಂದಿದ್ದರು. ಆದರೆ ಪುನೀತ್ ಅವರನ್ನು ಕಳೆದುಕೊಂಡ ಸುದೀಪ್ ಈ ವರ್ಷದ ಬರ್ತಡೇಯನ್ನು ಸಿಂಪಲ್ ಆಗಿ ಆಚರಿಸಲು ನಿರ್ಧರಿಸಿದ್ದರು. ಆದರೆ ಅವರ ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಹಬ್ಬದ ರೀತಿ ಸೆಲೆಬ್ರೇಟ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಸೂಪರ್ ಹಿಟ್ ಆಗಿತ್ತು. ಸಾಕಷ್ಟು ಅಡೆತಡೆಗಳ ಮಧ್ಯೆ ತೆರೆಗೆ ಬಂದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಸದ್ಯ ಸುದೀಪ್, ಉಪೇಂದ್ರ ನಟನೆಯ ಕಬ್ಜ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ಇತ್ತೀಚೆಗಷ್ಟೇ ಸುದೀಪ್ ಬರ್ತಡೇ ಪ್ರಯುಕ್ತ ನಟ ಶಿವರಾಜ್ ಕುಮಾರ್ ಕಾಮನ್ ಡಿಪಿ ಅನಾವರಣ ಮಾಡಿದ್ದರು. ಸುದೀಪ್ ಅವರು ಲಕ್ಷಾಂತರ ಅಭಿಮಾನಿಗಳ ಜತೆ ನಿಂತಿರುವ ರೀತಿಯಲ್ಲಿ ಈ ಚಿತ್ರ ಮೂಡಿ ಬಂದಿತ್ತು. ಈ ಫೋಟೋವನ್ನು ಪ್ರೊಫೈಲ್ ಪಿಕ್ಚರ್ ಮಾಡಿಕೊಂಡು ಫ್ಯಾನ್ಸ್ ಖುಷಿ ಪಟ್ಟಿದ್ದಾರೆ.
