• January 2, 2026

ತೆರೆಗೆ ಬರುತ್ತಿದೆ ಕೆಜಿಎಫ್ ಸಿನಿಮಾ: ಯಶ್ ಅಲ್ಲ ಚಿಯಾನ್ ವಿಕ್ರಂ ಹೀರೋ

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ಅತ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪರಭಾಷಾ ಮಂದಿಯನ್ನು ಗಾಂಧಿನಗರದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಇದು. ಸದ್ಯ ಅಭಿಮಾನಿಗಳು ಕೆಜಿಎಫ್ 3 ಯಾವಾಗ ಬರುತ್ತೆ ಎಂದು ಕಾದು ಕೂತಿದ್ದಾರೆ.ಆದ್ರೆ ಕೆಜಿಎಫ್ 3 ಸದ್ಯದಕ್ಕೆ ಇಲ್ಲ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಸ್ಪಷ್ಟವಾಗಿ ಹೇಳಿದ್ದಾರೆ. ಈ ಮಧ್ಯೆ ತಮಿಳಿನಲ್ಲಿ ಕೆಜಿಎಫ್ ಸಿನಿಮಾ ಸೆಟ್ಟೇರಿದೆ. ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸಿನಿಮಾದಲ್ಲಿ ಕಾಲ್ಪನಿಕ ಕಥೆಯನ್ನೇ ಹೆಚ್ಚಾಗಿ ತೋರಿಸಲಾಗಿದೆ. ಕೆಜಿಎಫ್ ನಲ್ಲಿ ನಡೆದ ನೈಜ ಘಟನೆಯನ್ನು ಈ ಸಿನಿಮಾ ಒಳಗೊಂಡಿರಲಿಲ್ಲ. ಆದರೆ ಇದೀಗ ತಮಿಳಿನಲ್ಲಿ ರೆಡಿಯಾಗುತ್ತಿರುವ ಕೆಜಿಎಫ್ ಸಿನಿಮಾದಲ್ಲಿ ಕೆಜಿಎಫ್ ನಲ್ಲಿ ನಡೆದ ನೈಜ ಘಟನೆಗಳನ್ನು ಪ್ರೇಕ್ಷಕರ ಮುಂದೆ ಇಡಲು ನಿರ್ದೇಶಕರು ರೆಡಿಯಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಪ.ರಂಜಿತ್ ಕೆಜಿಎಫ್ ನ ರಿಯಲ್ ಇನ್ಸಿಡೆಂಟ್ ಗಳನ್ನು ತೆರೆ ಮೇಲೆ ತರುಲು ಮುಂದಾಗಿದ್ದಾರೆ. ಪ.ರಂಜಿತ್ ಗೆ ನಟ ಚಿಯಾನ್ ವಿಕ್ರಂ ಸಾಥ್ ನೀಡುತ್ತಿದ್ದಾರೆ.ಅಂದರೆ ಕೆಜಿಎಫ್ ಸಿನಿಮಾದಲ್ಲಿ ಚಿಯಾನ್ ವಿಕ್ರಂ ನಾಯಕನಾಗಿ ಕಾಣಿಸಿಕೊಳ್ತಿದ್ದಾರೆ. ಇದೇ ಮೊದಲ ಬಾರಿಗೆ ಕೆಜಿಎಫ್ ಕುರಿತಾಗಿ ರಿಯಲ್ ಆಗಿ ಬರುತ್ತಿರುವ ಸಿನಿಮಾ ತಮಿಳಿನ ಕೆಜಿಎಫ್ ಸಿನಿಮಾವಾಗಿರಲಿದೆ. ಕೆಜಿಎಫ್ ಸಿನಿಮಾಗೆ ಚಿಯಾನ್ ವಿಕ್ರಮ್ ನಾಯಕನಾಗಿ ಆಯ್ಕೆಯಾಗಿದ್ದು, ಇದೊಂದು ಒಳ್ಳೆಯ ಸಿನಿಮಾ ಆಗಲಿದೆ ಎಂದಿದ್ದಾರೆ ವಿಕ್ರಮ್. ಆಸ್ಕರ್ ಪ್ರಶಸ್ತಿ ಸಲ್ಲಬೇಕಾದ ಸಿನಿಮಾ ಇದಾಗಲಿದೆ ಎಂದೂ ಅವರು ಹಾಡಿ ಹೊಗಳಿದ್ದಾರೆ. ಪಾ.ರಂಜಿತ್ ದೇಸಿಯ ಕಥೆಗಳನ್ನು ಸಿನಿಮಾ ಮಾಡಿದ ನಿರ್ದೇಶಕ. ಶೋಷಿತರ ನೋವುಗಳನ್ನು ದೃಶ್ಯಕ್ಕೆ ತಂದ ಹೆಗ್ಗಳಿಕೆ ಇವರದ್ದು. ಒಟ್ನಲ್ಲಿ ಕೆಜಿಎಫ್ ಕಾಲ್ಪನಿಕ ಸಿನಿಮಾ ನೋಡಿದ ಅಭಿಮಾನಿಗಳು ಇದೀಗ ನೈಜ ಘಟನೆಯನ್ನು ತೆರೆ ಮೇಲೆ ನೋಡೋಕೆ ರೆಡಿಯಾಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now