ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸುಮನ್ ಸಾವಿನ ಕುರಿತು ಸುಳ್ಳು ಸುದ್ದಿ: ಕಾನೂನು ಸಮರಕ್ಕೆ ಮುಂದಾದ ನಟ
ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಹಾವಳಿ ಜಾಸ್ತಿಯಾಗಿದೆ. ಸಿಕ್ಕ ಸಿಕ್ಕವರೆಲ್ಲಾ ಯೂಟ್ಯಬ್ ಚಾನಲ್ ಶುರುಮಾಡಿಕೊಂಡಿದ್ದು ಇಲ್ಲ ಸಲ್ಲದ್ದನ್ನು ಅಪ್ ಲೋಡ್ ಮಾಡ್ತಿದ್ದಾರೆ. ಅದರಲ್ಲೂ ಸೆಲೆಬ್ರಿಟಗಳ ಸಾವಿನ ಕುರಿತಾಗಿ ಆಗಾಗ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಾರೆ. ಫೋಟೋ ಶಾಪ್ ಮೂಲಕ ಎಡಿಟ್ ಮಾಡಿ ಶ್ರದ್ಧಾಂಜಲಿ ಫೋಸ್ಟರ್ ಗಳನ್ನು ಹಾಕಿ ಸುದ್ದಿ ಪ್ರಕಟಿಸುತ್ತಾರೆ. ಸದ್ಯ ಸುಮನ್ ವಿಚಾರದಲ್ಲೂ ಹಾಗೆಯೇ ಆಗಿದೆ.
ಜನರನ್ನು ದಿಕ್ಕು ತಪ್ಪಿಸುತ್ತಿರುವ ಯೂಟ್ಯೂಬ್ ಚಾನಲ್ ಗಳಿಗೆ ಬುದ್ಧಿ ಕಲಿಸಲು ಸಮನ್ ಮುಂದಾಗಿದ್ದಾರೆ. ತಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಕೇಸು ದಾಖಲಿಸಲು ಮುಂದಾಗಿರುವ ಸುಮನ್ ಮಾಧ್ಯಮಗಳ ರೀತಿ ಯೂಟ್ಯೂಬ್ ಚಾನಲ್ ಗಳಿಗೂ ನೈತಿಕತೆ ಇರಬೇಕು ಎಂದಿದ್ದಾರೆ.
