• March 14, 2026

ರಾಮ ಮಂದಿರ ನಿರ್ಮಾಣಕ್ಕೆ 50 ಕೋಟಿ ನೀಡಿದ ರಾಕಿಂಗ್ ಸ್ಟಾರ್ ಯಶ್?

ಗಾಂಧಿನಗರದಲ್ಲಿ ಗಾಸಿಪ್ ಗಳೇನು ಹೊಸದಲ್ಲ. ನಿತ್ಯ ಒಂದಲ್ಲ ಒಂದು ಗಾಸಿಪ್ ಗಳು ಹರಡಿ ಸಂಜೆಗೆಲ್ಲಾ ತಣ್ಣಗಾಗಿ ಹೋಗುತ್ತವೆ. ಸದ್ಯ ರಾಕಿಂಗ್ ಸ್ಟಾರ್ ಯಶ್ ಕುರಿತಾಗಿ ಗಾಳಿ ಸುದ್ದಿಯೊಂದು ಹರಡಿದ್ದು ಇದೀಗ ಸೈಲೆಂಟ್ ಆಗಿದೆ. ಅಯೋದ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಸಾಕಷ್ಟು ಮಂದಿ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಅಂತೆಯೇ ಇತ್ತೀಚೆಗೆ ಯಶ್ 50 ಕೋಟಿ ದೇಣಿಗೆ ನೀಡಿದ್ದಾರೆ ಎಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಆದ್ರೆ ಈ ಬಗ್ಗೆ ಯಾವುದೇ ಸ್ಪಷ್ಟನೆ ಸಿಕ್ಕಿರಲಿಲ್ಲ.ಬರೀ ಅಂತೆಕಂತೆಗಳಷ್ಟೇ ಸುದ್ದಿಯಾಗಿತ್ತು. ಇದು ಸುಳ್ಳು ಸುದ್ದಿ ಎನ್ನುವುದು ಖಚಿತವಾಗಿದೆ. ಯಶ್ ರಾಮ ಮಂದಿರ ನಿರ್ಮಾಣಕ್ಕೆ 50 ಕೋಟಿ ನೀಡಿದ್ದರೆ ಇದು ಇಷ್ಟೊತ್ತಿಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿತ್ತು. ಹೀಗಾಗಿ ಇದು ಕೇವಲ ಗಾಳಿ ಸುದ್ದಿ ಅನ್ನೋದು ಗೊತ್ತಾಗಿದೆ. ಇತ್ತೀಚೆಗೆ ಸಂತೋಷ್ ತ್ರಿಪಾಠಿ ಅನ್ನುವವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಯಶ್ ದೇವಸ್ಥಾನದಲ್ಲಿ ಇರುವ ಫೋಟೊವೊಂದನ್ನು ಶೇರ್ ಮಾಡಿದ್ದರು. ಜೊತೆಗೆ “ದಕ್ಷಿಣದ ಸ್ಟಾರ್ ನಟ ಯಶ್‌ ಕುಮಾರ್ ಅಯೋಧ್ಯೆ ರಾಮಮಂದಿರದ ರಾಮ್‌ಲಲ್ಲಾಗೆ ಭೇಟಿ ನೀಡಿದ್ದರು. ಈ ವೇಳೆ ಮಂದಿರ ನಿರ್ಮಾಣಕ್ಕೆ 50 ಕೋಟಿ ರೂ. ದೇಣಿಗೆ ಘೋಷಿಸಿದ್ದಾರೆ” ಎಂದು ಬರೆದುಕೊಂಡಿದ್ದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅಂದಹಾಗೆ ಅದು ಕೆಜಿಎಫ್ 2 ಸಿನಿಮಾದ ರಿಲೀಸ್ ಟೈಮಲ್ಲಿ ಯಶ್ ತಿರುಪತಿಗೆ ಭೇಟಿ ನೀಡಿದ ಫೋಟೋವಾಗಿದೆ. ಇದೇ ಫೋಟೋವನ್ನು ಬಳಿಸಿಕೊಂಡು ಸಂತೋಷ್ ತ್ರಿಪಾಠಿ ಗಾಳಿ ಸುದ್ದಿ ಹಬ್ಬಿಸಿದ್ದರು. ಇನ್ನೂ ಯಶ್ ನಟನೆಯ ಮುಂದಿನ ಸಿನಿಮಾ ಯಾವುದು ಅನ್ನೋ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ. ನರ್ತನ್ ನಿರ್ದೇಶನದ ಸಿನಿಮಾ ತಡವಾಗುತ್ತಿದೆ. ಹೀಗಾಗಿ ಯಶ್ ಮುಂದಿನ ಚಿತ್ರಕ್ಕೆ ಯಾರು ಆಕ್ಷನ್ ಕಟ್ ಹೇಳುತ್ತಾರೆ? ಕತೆ ಏನು? ಸಿನಿಮಾ ಯಾವಾಗ ಸೆಟ್ಟೇರುತ್ತದೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now