ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಸಮನ್ಸ್ ಜಾರಿ ಮಾಡಿದ ದೆಹಲಿ ಕೋರ್ಟ್
ಪ್ರಕರಣವೊಂದರಲ್ಲಿ ಜೈಲಿನಲ್ಲಿರುವ ಉದ್ಯಮಿಯ ಪತ್ನಿಯಿಂದ ಸುಕೇಶ್ ಚಂದ್ರಶೇಖರ್ 200 ಕೋಟಿ ಪಡೆದುಕೊಂಡಿದ್ದ. ಈ ದುಡ್ಡಿನಲ್ಲಿ ಜಾಕ್ವೆಲಿನ್ ಗೆ ದುಭಾರಿ ಮೊತ್ತದ ಉಡುಗೊರೆಯನ್ನು ನೀಡಿದ್ದ. ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಜಾಕ್ವೆಲಿನ್ ಹಲವು ಬಾರಿ ಹೇಳಿಕೊಂಡಿದ್ದರು, ಆದರೂ ಜಾರಿ ನಿರ್ದೇಶನಾಲಯ ಜಾಕ್ವೆಲಿನ್ ಹೆಸರು ಸೇರಿಸಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಹಾಗಾಗಿ ಸೆಪ್ಟಂಬರ್ 26ರಂದು ಕೋರ್ಟಿಗೆ ಹಾಜರಾಗುವಂತೆ ದೆಹಲಿಯ ಪಟಿಯಾಲ ಕೋರ್ಟ್ ಜಾಕ್ವೆಲಿನ್ ಗೆ ಸಮನ್ಸ್ ಜಾರಿ ಮಾಡಿದೆ.
ಸುಕೇಶ್ ವಂಚನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆತನೊಂದಿಗೆ ಜಾಕ್ವೆಲಿನ್ ಇದ್ದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗತ್ತು. ಸುಕೇಶ್ ಜಾಕ್ವೆಲಿನ್ ಗೆ ದುಬಾರಿ ಕಾರು, ಕುದುರೆ, ಡೈಮಂಡ್ ನೆಕ್ಲೆಸ್, ದುಬಾರಿ ಬ್ಯಾಗ್ ಗಳನ್ನು ಉಡುಗೊರೆಯಾಗಿ ನೀಡಿದ್ದ. ಅಲ್ಲದೆ ನಟಿ ಸಾರಾ ಅಲಿಖಾನ್ ಸೇರಿದಂತೆ ಇನ್ನೂ ಕೆಲವು ನಟಿಯರಿಗೂ ಈತ ಆಮಿಷವೊಡ್ಡಿದ್ದಾಗಿ ತನಿಖೆಯಿಂದ ಬಯಲಾಗಿತ್ತು, ಒಟ್ನಲ್ಲಿ ಸುಕೇಶ್ ಸ್ನೇಹ ಮಾಡಿದ ತಪ್ಪಿಗೆ ಜಾಕ್ವೆಲಿನ್ ಕಟಕಟೆಯಲ್ಲಿ ನಿಲ್ಲುವಂತಾಗಿದೆ.
