• March 14, 2026

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಸಿನಿಮಾಗೆ ನಂದ ಕಿಶೋರ್ ನಿರ್ದೇಶನ

ವಿಕ್ಟರಿ, ಅಧ್ಯಕ್ಷ, ಮುಕುಂದ ಮುರಾರಿ ಸೇರಿದಂತೆ ಕನ್ನಡದ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದ ನಿರ್ದೇಶಕ ನಂದ ಕಿಶೋರ್ ಸದ್ಯ ರಾಣಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯದಲ್ಲೇ ನಂದಕಿಶೋರ್ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರಿಗೆ ಸಿನಿಮಾ ಮಾಡಲಿದ್ದಾರೆ. ನಂದಕಿಶೋರ್ ಸಿನಿಮಾದಲ್ಲಿ ನಟಿಸುತ್ತಿರುವ ಕುರಿತು ಸ್ವತಃ ಮೋಹನ್ ಲಾಲ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಂದಕಿಶೋರ್ ಸಿನಿಮಾದಲ್ಲಿ ನಟಿಸಲು ಎಕ್ಸೈಟ್ ಆಗಿದ್ದೇನೆ ಎಂದು ಬರೆದಿದ್ದಾರೆ. ನಂದಕಿಶೋರ್ ಹಾಗೂ ಮೋಹನ್ ಲಾಲ್ ಕಾಂಬಿನೇಷನ್ ನ ಸಿನಿಮಾಗೆ ವೃಷಭ ಎಂದು ಟೈಟಲ್ ಇಡಲಾಗಿದೆ. ಎವಿಎಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಲಿರೋ ವೃಷಭ ಸಿನಿಮಾಗೆ ಅಭೀಷೇಕ್ ‍ವ್ಯಾಸ್, ಪ್ರವೀಣ್ ಸಿಂಗ್ ಮತ್ತು ಶ್ಯಾಂಸ್ ಸುಂದರ ಬಂಡವಾಳ ಹೂಡುತ್ತಿದ್ದಾರೆ. ಎವಿಎಸ್ ಸ್ಟುಡಿಯೋ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಇಂತಹ ಸಿನಿಮಾಗೆ ನಿಮ್ಮ ಬೆಂಬಲವಿರಲಿ ಎಂದು ಮೋಹನ್ ಲಾಲ್ ಸೋಷಿಯಲ್ ಮೀಡಿಯಾದಲ್ಲಿ ಕೇಳಿಕೊಂಡಿದ್ದಾರೆ. ಪಕ್ಕ ಕಮರ್ಷಿಯಲ್ ಸಿನಿಮಾವಾಗಿರೋ ವೃಷಭದಲ್ಲಿ ನಾಯಕ ಹಲವು ಆಯಾಮಗಳಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 2023ರ ಜುಲೈ ತಿಂಗಳಿನಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದ್ದು ತೆಲುಗಿನ ಸ್ಟಾರ್ ನಟರೊಬ್ಬರು ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now