• June 13, 2026

‘ಲಾಲ್ ಸಿಂಗ್ ಚಡ್ಡಾ’ ಚಿತ್ರದಿಂದ 100 ಕೋಟಿ ಕಳೆದುಕೊಂಡ ಅಮೀರ್ ಖಾನ್

ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ಕಾಟ್ ಗೆ ಬಲಿಯಾಗಿದೆ. ಸಿನಿಮಾ ಸೋಲುತ್ತಿದ್ದಂತೆ ಅದರ ಲೆಕ್ಕಾಚಾರಗಳು ಶುರುವಾಗಿದೆ. ಸದ್ಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ನಟನೆಯ ಜೊತೆಗೆ ನಿರ್ಮಾಪಕರು ಆಗಿರುವ ಅಮೀರ್ ಖಾನ್ ಚಿತ್ರದಿಂದ ಎಷ್ಟು ಕಳೆದುಕೊಂಡಿದ್ದಾರೆ ಎಂಬ ಅಂದಾಜು ಸಿಕ್ಕಿದೆ. ಸುಮಾರು 180 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಸಿನಿಮಾ ಅಂದುಕೊಂಡ ಮಟ್ಟಿಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿಲ್ಲ. ಹಾಕಿದ ಬಂಡವಾಳ ಕೂಡ ವಾಪಸ್ ಬಂದಿಲ್ಲ ಎನ್ನಲಾಗುತ್ತಿದೆ. ಹೀಗಾಸಿ ಲಾಲ್ ಸಿಂಗ್ ಚಡ್ಡಾ ಸಿನಿಮಾದಿಂದ ನಿರ್ಮಾಪಕರು ಕೈ ಸುಟ್ಟುಕೊಂಡಿದ್ದಾರೆ. ಮೂಲಗಳ ಪ್ರಕಾರ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾದಿಂದ ನೂರು ಕೋಟಿ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಲಾಲ್ ಸಿಂಗ್ ಚಡ್ಡಾ ಸೋಲಿನಿಂದ ಹಣ ಮಾತ್ರವಲ್ಲ ಸಿನಿಮಾದ ಅವಕಾಶಗಳು ಅಮೀರ್ ಕೈ ತಪ್ಪಿ ಹೋಗಿವೆ. ಅಮೀರ್ ನಟನೆಯ ಸಿನಿಮಾಗಳು ಸದ್ಯದ ಮಟ್ಟಿಗೆ ಮುಂದೂಡಲಾಗಿದೆ ಎನ್ನಲಾಗುತ್ತಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now