ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪುಷ್ಪ ಸ್ಟೈಲ್ ನಲ್ಲಿ ಮಿಂಚಿದ ವಿಘ್ನ ನಿವಾರಕ: ಅಸಮಾಧಾನ ಹೊರ ಹಾಕಿದ ಭಕ್ತರು
ಇದೇ ರೀತಿಯಲ್ಲಿ ಸೂಪರ್ ಹಿಟ್ ಸಿನಿಮಾ ಪುಷ್ಪ ಸಿನಿಮಾದ ಸ್ಟೈಲ್ ನಲ್ಲೂ ಗಣೇಶನ ಮೂರ್ತಿಯನ್ನು ರೆಡಿ ಮಾಡಲಾಗಿದೆ. ಅಲ್ಲು ಅರ್ಜುನ್ ಅವರು ‘ತಗ್ಗೆದೆಲೇ ಎಂದು ಡೈಲಾಗ್ ಹೊಡೆದ ರೀತಿಯಲ್ಲೇ ಗಣೇಶ ಮೂಡಿಬಂದಿದ್ದಾನೆ. ಆ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಲ್ಲು ಅರ್ಜುನ್ ಅಭಿಮಾನಿಗಳು ಇದನ್ನು ನೋಡಿ ಖುಷಿ ಪಟ್ಟರೆ ಮತ್ತೊಂದಷ್ಟು ಜನ ಅಸಮಾಧಾನ ಹೊರ ಹಾಕಿದ್ದಾರೆ.
ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಹಲವು ಬಗೆಯ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಇದನ್ನು ವಿರೋಧಿಸಿದ್ದಾರೆ. ‘ಓರ್ವ ನಟನ ಮೇಲೆ ಅಭಿಮಾನ ಇರುವುದು ಸಹಜ. ಆದರೆ ಗಣೇಶನಿಗೆ ಈ ರೂಪ ನೀಡಿರುವುದು ಸರಿಯಲ್ಲ. ನೀವು ಗಣಪನನ್ನು ಪೂಜಿಸುತ್ತಿದ್ದೀರೋ ಅಥವಾ ಅಣಕಿಸುತ್ತಿದ್ದೀರೋ’ ಎಂದು ನೆಟ್ಟಿಗರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
