• March 16, 2026

ಗಣೇಶನ ಹಬ್ಬಕ್ಕೆ ರಿಲೀಸ್ ಆಯ್ತು ಪುನೀತ್ ನಟನೆಯ ಗಂಧದ ಗುಡಿ ಪೋಸ್ಟರ್

ಹಬ್ಬಗಳು ಬಂದ್ರೆ ಸಿನಿಮಾ ರಂಗದಲ್ಲಿ ಸುಗ್ಗಿ ಶುರುವಾಗುತ್ತೆ. ಹೊಸ ಹೊಸ ಸಿನಿಮಾಗಳ ಅನೌನ್ಸ್, ಪೋಸ್ಟರ್ ರಿಲೀಸ್, ಸಾಂಗ್, ಟ್ರೈಲರ್ ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಸಿನಿಮಾಗಳು ಸುದ್ದಿ ಮಾಡುತ್ತವೆ. ಅಂತೆಯೇ ಪುನೀತ್ ಅಭಿಮಾನಿಗಳಿಗಾಗಿ ಗಂಧದ ಗುಡಿ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಬಾರಿಯ ಗಣೇಶ ಹಬ್ಬ ಆಚರಿಸಲು ಪುನೀತ್ ನಮ್ಮೊಂದಿಗಿಲ್ಲ ಎಂಬ ನೋವು ಪ್ರತಿಯೊಬ್ಬರನ್ನು ಕಾಡುತ್ತಿದೆ. ಅಪ್ಪು ಅವರಲ್ಲಿ ದೇವರನ್ನು ಕಾಣುತ್ತಿದ್ದ ಅಭಿಮಾನಿಗಳ ಗಣೇಶ ಜೊತೆ ಪುನೀತ್ ಅವರನ್ನು ಕೂರಿಸಿ ಪೂಜಿಸುತ್ತಿದ್ದಾರೆ. ಇದೀಗ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾ ಗಂಧದ ಗುಡಿ ಚಿತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಪಿಆರ್ ಕೆ ಸಂಸ್ಥೆ ನಿರ್ಮಾಣ ಮಾಡಿರುವ ಪುನೀತ್ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ ತೆರೆಗೆ ಬರುವ ಮುನ್ನವೇ ಪುನೀತ್ ನಮ್ಮನ್ನು ಅಗಲಿದ್ದಾರೆ. ಆದರೆ ಪುನೀತ್ ಅವರ ಕನಸಿನ ಚಿತ್ರಕ್ಕೆ ಮತ್ತಷ್ಟು ಜೀವ ತುಂಬಿ ಅಭಿಮಾನಿಗಳ ಮುಂದಿಡಲು ಪಿಆರ್ ಕೆ ಸಂಸ್ಥೆ ಮುಂದಾಗಿದೆ. ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಆನೆಯ ಮುಂದೆ ಪುನೀತ್ ರಾಜ್ ಕುಮಾರ್ ನಿಂತಿರುವ ಪೋಸ್ಟರ್ ಒಂದನ್ನ ಪಿಆರ್ ಕೆ ಸಂಸ್ಥೆ ಬಿಡುಗಡೆ ಮಾಡಿದೆ. ಗಂಧದ ಗುಡಿ ಸಿನಿಮಾ ಅಕ್ಟೋಬರ್ 28ಕ್ಕೆ ಅದ್ದೂರಿಯಾಗಿ ತೆರೆಗೆ ಬರಲಿದೆ. ಇದೇ ಅಕ್ಟೋಬರ್ 29ಕ್ಕೆ ಪುನೀತ್ ರಾಜ್ ಕುಮಾರ್ ಅಗಲಿ ಒಂದು ವರ್ಷ ಕಳೆಯುತ್ತಿದೆ. ಅದಕ್ಕೂ ಒಂದು ದಿನ ಮುನ್ನ ಅಂದರೆ ಅಕ್ಟೋಬರ್ 28ಕ್ಕೆ ಸಿನಿಮಾ ಬಿಡುಗಡೆ ಮಾಡೋದಾಗಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ತಿಳಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now