• January 2, 2026

ಖಾಸಗಿ ವಿಡಿಯೋ ಲೀಕ್ ಬೆದರಿಕೆ: ಮಾಜಿ ಪ್ರೇಮಿಯ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ‘ಹೆಬ್ಬುಲಿ’ ನಟಿ

ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದ ನಟಿ ಅಮಲಾ ಪೌಲ್ ಅವರ ಖಾಸಗಿ ವಿಡಿಯೋವನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಆಕೆಯ ಮಾಜಿ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಸ್ವತಃ ನಟಿ ಅಮಲಾ ಪೌಲ್ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಮಾಜಿ ಬಾಯ್ ಫ್ರೆಂಡ್ ಭವಿಂದರ್ ಸಿಂಗ್ ಖಾಸಗಿ ವಿಡಿಯೋವನ್ನು ರಿಲೀಸ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಅಮಲಾ ದೂರು ನೀಡಿದ್ದರು. ಈ ದೂರನ್ನು ಆಧರಿಸಿದ ಮಾಜಿ ಬಾಯ್ ಫ್ರೆಂಡ್ ಭವಿಂದರ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಎ.ಎಲ್.ವಿಜಯ್ ರನ್ನು ಮದುವೆಯಾಗಿದ್ದ ಅಮಲಾ ಪೌಲ್ ಕೆಲ ವರ್ಷಗಳಲ್ಲೇ ಅವರಿಂದ ದೂರವಾಗಿದ್ದರು. ಬಳಿಕ ಭವಿಂದರ್ ಸಿಂಗ್ ಅವರನ್ನು ಪ್ರೀತಿಸುತ್ತಿದ್ದ ನಟಿ ಒಟ್ಟಿಗೆ ಸಿನಿಮಾಗಳಿಗೆ ಬಂಡವಾಳ ಹೂಡಿದ್ದರು. ಆದರೆ ವ್ಯವಹಾರದಲ್ಲಿ ವೈಮನಸ್ಸು ಬಂದ ಕಾಣಕ್ಕೆ ಇಬ್ಬರು ಬೇರೆ ಬೇರೆಯಾಗಿದ್ದರು. ಅಮಲಾ ಪೌಲ್ ಅವರ ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ತಾನು ಹೇಳಿದಂತೆ ಕೇಳಬೇಕು ಎಂದು ಹಿಂಸೆ ನೀಡುತ್ತಿರುವುದಾಗಿ ತಮಿಳುನಾಡಿನ ವಿಲ್ಲುಪುರಂ ಪೊಲೀಸರಿಗೆ ಅಮಲಾ ಪೌಲ್ ದೂರು ನೀಡಿದ್ದರು. ಅಲ್ಲದೇ, ಬಾಯ್ ಫ್ರೆಂಡ್ ನ ಹನ್ನೆರಡು ಜನ ಸ್ನೇಹಿತರ ಮೇಲೂ ಅವರು ದೂರು ನೀಡಿದ್ದರು. ಅವರಿಂದಲೂ ತಮಗೆ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಮೂಲಗಳ ಪ್ರಕಾರ ಅಮಲಾ ಪೌಲ್ ಮತ್ತು ಭವಿಂದರ್ ಸಿಂಗ್ ಎರಡು ವರ್ಷಗಳ ಹಿಂದೆಯೇ ಮದುವೆಯಾಗಿದ್ದರು ಎನ್ನಲಾಗಿತ್ತು. ಜೊತೆಗೆ ಮದುವೆಯ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ ಅಮಲಾ ಪೌಲ್ ಮಾತ್ರ ತಾನು ಎರಡನೇ ಮದುವೆಯಾಗಿಲ್ಲ ಎಂದು ಸಮರ್ಥನೆ ನೀಡಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now