ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿಜಯ್ ದೇವರಕೊಂಡಗೂ ಮೊದಲು ಲೈಗರ್ ಕಥೆಯನ್ನು ಬೇರೊಬ್ಬ ನಾಯಕನಿಗೆ ಹೇಳಿದ್ದ ಪೂರಿ ಜಗನ್ನಾಥ್
ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿರುವ ಲೈಗರ್ ಸಿನಿಮಾದಲ್ಲಿ ನಟಿಸಲು ಪೂರಿ ಜಗನ್ನಾಥ್ ಮೊದಲಿಗೆ ಮಹೇಶ್ ಬಾಬು ಅವರಿಗೆ ಆಫರ್ ನೀಡಿದ್ದರಂತೆ. ಮಹೇಶ್ ಹಾಗೂ ಪೂರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ತೆರೆಗೆ ಬಂದ ಪೋಕಿರಿ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆದರೆ ಲೈಗರ್ ಸಿನಿಮಾದ ಕಥೆ ಕೇಳಿ ಮಹೇಶ್ ರಿಜೆಕ್ಟ್ ಮಾಡಿದ್ದರು.
ಮಹೇಶ್ ಬಾಬು ನಿರಾಕರಿಸಿದ ಬಳಿಕ ವಿಜಯ್ ದೇವರಕೊಂಡರನ್ನು ಅಪ್ರೋಚ್ ಮಾಡಿದ್ದರಂತೆ. ಸಿನಿಮಾದ ಕುರಿತಾಗಿ ನೆಗೆಟಿವ್ ಕಾಮೆಂಟ್ ಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮಹೇಶ್ ಈ ಸಿನಿಮಾವನ್ನು ಒಪ್ಪಿಕೊಳ್ಳದೆ ಇದ್ದದ್ದು ಒಳ್ಳೆಯದಾಯಿತು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
