ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸಿನಿಮಾಗಾಗಿ ಮನೆ ಮಠ ಕಳೆದುಕೊಂಡ್ರು ಜನರ ಪ್ರೀತಿ ಗಳಿಸಿದೆ: ಹಿರಿಯ ನಟ ದ್ವಾರಕೀಶ್
ಸಿನಿಮಾದ ಮೇಲಿನ ಆಸೆಯಿಂದ ಅದರ ಹಿಂದೆ ಹೋದೆ. ಅದಕ್ಕಾಗಿ ನಾನು ಗಳಿಸಿದ್ದ ಹಣ, ಕಟ್ಟಿಸಿದ್ದ ಮನೆ ಎಲ್ಲವನ್ನು ಮಾರಿಕೊಂಡೆ. ಆದರೆ ಮಾರಿ ಕೊಳ್ಳಲು ಆಗದೆ ಇರುವ ಮನೆಯನ್ನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಸನ್ನಿಧಿಯಲ್ಲಿ ಕಟ್ಟಿಸಿದ್ದೇನೆ ಅದೆ ನಿಜವಾದ ಮನೆ, ಇದೆಲ್ಲಾ ಕ್ಷಣಿಕ ಎಂದರು.
ನಾನು ಸತ್ತ ಮೇಲೆ ನನ್ನ ನೋಡಲು ಬರುವ ಕಲಾವಿದರು, ತಂತ್ರಜ್ಞರು ಮತ್ತು ಜನರ ಪ್ರೀತಿ ನಾನು ಸಂಪಾದಿಸಿರುವ ನಿಜವಾದ ಆಸ್ತಿ. ಅವುಗಳ ನನ್ನಿಂದ ಯಾವತ್ತು ದೂರ ಆಗಲ್ಲ. ದೊಡ್ಡ ಬಂಗಲೆಗಳು, ಹಣಕ್ಕಿಂತ ನಿಮ್ಮ ಪ್ರೀತಿ ಇದ್ದರೆ ಸಾಕು ಎಂದು ಹೇಳಿದರು.
‘ಆಗಿನ ಕಾಲಕ್ಕೆ 40 ಸಾವಿರ ಖರ್ಚು ಮಾಡಿ ಮಾಡಿದ್ದ ‘ಮಮತೆಯ ಬಂಧನ’ ಸಿನಿಮಾಸೂಪರ್ ಹಿಟ್ ಆಯಿತು. ಫಿಯೇಟ್ ಕಾರು ಇಟ್ಟುಕೊಂಡಿದ ಕನ್ನಡದ ಮೊದಲ ನಟ ನಾನು ಎಂಬ ಖುಷಿ ಇದೆ. ರಾಜ್ ಕುಮಾರ್ ಜೊತೆ ಸತ್ಯಹರಿಶ್ಚಂದ್ರ ಸಿನಿಮಾಗೆ 750 ರೂಪಾಯಿ ಸಂಭಾವನೆ ತೆಗೆದುಕೊಂಡಿದೆ. ಆ ಚಿತ್ರದಲ್ಲಿ ಡಾ ರಾಜ್‌ಕುಮಾರ್ ಬಿಟ್ಟರೆ ನಾನು ಅತ್ಯಂತ ದುಬಾರಿ ನಟ ಅನಿಸಿಕೊಂಡಿದ್ದೆ ಎಂದರು.
ನನ್ನ ಚಿತ್ರರಂಗಕ್ಕೆ ಕರೆತಂದ ನನ್ನ ಮಾವ ಹುಣಸೂರು ಕೃಷ್ಣ ಮೂರ್ತಿ, ಡಾ ರಾಜ್‌ಕುಮಾರ್, ಡಾ ವಿಷ್ಣುವರ್ಧನ್, ವರದಪ್ಪ, ಮೇಕಪ್ ಆರ್ಟಿಸ್ಟ್‌ಗಳಾಗಿದ್ದ ಮಾದವಯ್ಯ, ವೀರರಾಜು ಇವರು ನನ್ನ ಜೀವನದಲ್ಲಿ ಮರೆಯಲಾಗದ ವ್ಯಕ್ತಿಗಳು ಎಂದ ದ್ವಾರಕೀಶ್ ಸ್ಮರಿಸಿದರು.
