ಯಶ್ ನಟನೆಯ ಕೆಜಿಎಫ್ ಸಿನಿಮಾದ ಬಳಿಕ ನಟಿ ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಜಿಎಫ್ ಬಳಿಕ ಶ್ರೀನಿಧಿ ಶೆಟ್ಟಿಗೆ ದೊಡ್ಡ ದೊಡ್ಡ ಸಿನಿಮಾದ ಆಫರ್ ಗಳು ಬರುತ್ತಿವೆ. ಸದ್ಯ ಚಿಯಾನ್ ವಿಕ್ರಂ ಜೊತೆ ತಮಿಳಿನಲ್ಲಿ ನಟಿಸಿರುವ ಕೋಬ್ರಾ ಸಿನಿಮಾ ಬಿಡುಗಡೆಗೆ ಸಿದ್ದವಾಗಿದೆ. ಇತ್ತೀಚೆಗಷ್ಟೇ ಹೈದರಾಬಾದ್ ನಲ್ಲಿ ಕೋಬ್ರಾ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆದಿದೆ.
ದೊಡ್ಡ ಮಟ್ಟದಲ್ಲಿ ತೆರೆಗೆ ಬರಲು ಸಿದ್ದವಾಗಿರೋ ಕೋಬ್ರಾ ಸಿನಿಮಾ ಭರ್ಜರಿಯಾಗಿಯೇ ಪ್ರಮೋಷನ್ ಮಾಡುತ್ತಿದೆ. ನಟ ಚಿಯಾನ್ ವಿಕ್ರಂಗೆ ಆಂಧ್ರ ಹಾಗೂ ತೆಲಂಗಾಣದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಹೀಗಾಗಿ ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ಕೋಬ್ರಾ ಸಿನಿಮಾದ ಪ್ರಚಾರ ಮಾಡಲಾಗಿದೆ. ಈ ವೇಳೆ ನಟಿ ಶ್ರೀನಿಧಿ ಶೆಟ್ಟಿ ತೆಲುಗಿನಲ್ಲಿ ಮಾತನಾಡಿದ್ದ ಕೇಳಿ ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮೂಲತಃ ಕರ್ನಾಟಕದವರಾದ ಶ್ರೀನಿಧಿ ಶೆಟ್ಟಿ ಸಿನಿಮಾಗಾಗಿ ಬೇರೆ ಬೇರೆ ಭಾಷೆಗಳನ್ನು ಕಲಿಯುತ್ತಿದ್ದ ಆಯಾ ಸ್ಥಳಕ್ಕೆ ಹೋದಾಗ ಆಯಾ ಭಾಷೆಗಳನ್ನು ಮಾತನಾಡುತ್ತಿರುವುದು ಕೇಳಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತೆಲುಗಿನಲ್ಲಿ ಶ್ರೀನಿಧಿ ಮಾತನಾಡಿದ್ದು ಕೇಳಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಪ್ಪಟ ತೆಲುಗಿನಲ್ಲಿ ಮಾತನಾಡಿದ ಶ್ರೀನಿಧಿ ಸಿನಿಮಾ ನೋಡಿ ಪ್ರೋತ್ಸಾಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಜೊತೆಗೆ ಕೋಬ್ರಾ ಸಿಇಮಾ ಯಾಕೆ ನೋಡಬೇಕು? ಏನು ಸ್ಪೆಷಲ್ ಅನ್ನೋದನ್ನು ಹೇಳಿದ್ದಾರೆ.

‘ಕೋಬ್ರಾ’ ಸಿನಿಮಾಗೆ ಆರ್. ಅಜಯ್ ಜ್ಞಾನಮುತ್ತು ನಿರ್ದೇಶನ ಮಾಡಿದ್ದಾರೆ. ಹಲವು ಗೆಟಪ್ಗಳಲ್ಲಿ ವಿಕ್ರಮ್ ಕಾಣಿಸಿಕೊಂಡಿದ್ದಾರೆ. ಇರ್ಫಾನ್ ಪಠಾಣ್ ಕೂಡ ಈ ಸಿಮಾದಲ್ಲಿ ನಟಿಸಿರುವುದು ವಿಶೇಷ. ಎ.ಆರ್. ಹೆರಮಾನ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಕೋಬ್ರಾ’ ಟ್ರೇಲರ್ಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.

ಆರ್ ಅಜಯ್ ಜ್ಞಾನಮುತ್ತು ನಿರ್ದೇಶನದ ಕೋಬ್ರಾ ಸಿನಿಮಾವನ್ನು 7 ಸ್ಕ್ರೀನ್ ಬ್ಯಾನರ್ ಅಡಿಯಲ್ಲಿ ಲಲಿತ್ ಕುಮಾರ್ ನಿರ್ಮಾಣ ಮಾಡಿದ್ದಾರೆ. 90 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾಗಿರುವ ಕೋಬ್ರಾ ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಹಲವು ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಇರ್ಫಾನ್ ಪಠಾಣ್ ಕೂಡ ನಟಿಸಿದ್ದು ಎ.ಆರ್.ರೆಹೆಮಾನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಯಾನ್ ವಿಕ್ರಮ್ ಚಿತ್ರದಲ್ಲಿ ಹಲವು ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದು ಕೋಬ್ರಾ ಟ್ರೈಲರ್ ಗೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ.