• June 13, 2026

ರಾಕೇಶ್ ನನ್ನು ಟೆಂಪರವರಿ ಥರ ನೋಡಿಲ್ಲ? ಕಣ್ಣೀರಿಟ್ಟ ಸೋನು ಗೌಡ

ಬಿಗ್ ಬಾಸ್ ಒಟಿಟಿ ದಿನಕಳೆದಂತೆ ರಂಗೇರುತ್ತಿದೆ. ಈಗಾಗ್ಲೆ ಮನೆಯಿಂದ ಒಂದಷ್ಟು ಜನ ಹೊರ ಹೋಗಿದ್ದು ಉಳಿದುಕೊಂಡವರು ಅಲ್ಲೇ ಇರಲು ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಿದ್ದಾರೆ. ಸದ್ಯ ಮನೆಯಲ್ಲಿ ಒಂದಷ್ಟು ಗುಂಪುಗಳು ಶುರುವಾಗಿದ್ದು ತಮಗೆ ಹೊಂದುವವರ ಸ್ನೇಹ ಸಂಪಾದಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಜೊತೆ ಸೋನು ಶ್ರೀನಿವಾಸ್ ಗೌಡ ಫ್ರೆಂಡ್‌ಶಿಪ್ ಮನೆಯ ಹೈಲೈಟ್‌ ಆಗಿದೆ. ಇಬ್ಬರು ಹೆಚ್ಚು ಹೆಚ್ಚು ಸಮಯ ಕಳೆಯುತ್ತಿದ್ದು ಇದೀಗ ರಾಕೇಶ್ ನೆನೆದು ಸೋನು ಕಣ್ಣಿರು ಹಾಕಿದ್ದಾರೆ. ರಾಕೇಶ್ ಗಾಗಿ ಸೋನು ಕಣ್ಣೀರು ಹಾಕಿದ್ದು ನೋಡಿ ಆಕೆಗೆ ರಾಕಿ ಮೇಲೆ ಲವ್ ಆಗಿದ್ಯಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಬಿಗ್ ಬಾಸ್‌ನಲ್ಲಿ ರಾಕೇಶ್ ಸೋನುಳನ್ನು ಹರ್ಟ್ ಮಾಡಿದ್ದಾನೆ. ರಾಕೇಶ್ ಹೇಳಿದ ಮಾತಿಗೆ ಸೋನು ಕಣ್ಣೀರು ಹಾಕಿದ್ದಾರೆ. ಅಕ್ಷತಾ ಬಳಿ ಬಂದ ಸೋನು ಎಲ್ಲವನ್ನು ಹೇಳಿಕೊಂಡು ಕಣ್ಣೀರು ಹಾಕಿದ್ದಾಳೆ. ಅವ್ನು ನನ್ನ ಬೇಬಿಮಾ ಅಂದುಕೊಂಡಿದ್ದಾನೆ ಏನನ್ನು ಸೀರಿಯಸ್ ಆಗಿ ತೆಗೆದುಕೊಳ್ಳಲ್ಲ ಎಂದುಕೊಂಡಿದ್ದಾನೆ. ನಮ್ಮ ಮೇಲೆ ಆಣೆಗೂ, ಬ್ರೀಜರ್ ಮೇಲೆ ಆಣೆಗೂ ನಾನು ಅವನನ್ನು ಟೆಂಪರವರಿ ಥರ ನೋಡಿಲ್ಲ ಎಂದು ಸೋನು ಹೇಳಿಕೊಂಡಿದ್ದಾರೆ. ನಾವೂ ಒಬ್ಬರಿಗೆ ಪ್ರೀತಿ ಕೊಟ್ಟಾಗ ಮತ್ತೆ ಆ ಪ್ರೀತಿ ಸಿಗದೆ ಹೋದರೆ ಎಷ್ಟು ಹರ್ಟ್ ಆಗುತ್ತೆ ಗೊತ್ತಾ. ನೀನು ನನ್ನನ್ನ ನೋಡಿದ್ದೀಯಾ. ಇಲ್ಲಿ ಎಷ್ಟು ಜನ ಹುಡುಗರಿದ್ದಾರೆ. ಆದರೆ ನಾನು ಯಾರ ಜೊತೆಗೂ ಹಗ್ ಮಾಡಲ್ಲ, ಅವನ ಜೊತೆ ಇದ್ದಷ್ಟು ಕ್ಲೋಸ್ ಬೇರೆ ಯಾರ ಜೊತೆಗೂ ಇಲ್ಲ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಇದೇ ಸಮಯಕ್ಕೆ ಅಲ್ಲಿಗೆ ಬಂದ ರಾಕೇಶ್ ನಾನು ಎಲ್ಲವನ್ನು ಅರ್ಥ ಮಾಡಿಸುತ್ತೀನಿ ಎಂದಾಗ ಸೋನು ಇನ್ನು ಯಾವಾಗ ಅರ್ಥ ಮಾಡಿಸುತ್ತೀಯಾ, ಅರ್ಥ ಮಾಡಿಸುವುದು, ಅರ್ಥ ಮಾಡಿಸುವವರು ಬೇಡ. ಅರ್ಥ ಮಾಡಿಕೊಳ್ಳುವವರು ಬೇಕು ಎಂದಿದ್ದಾಳೆ. ಅದಕ್ಕೆ ಅಕ್ಷತಾ ಆಯ್ತು ನೀನೆ ಅರ್ಥ ಮಾಡಿಸು ಎಂದಿದ್ದು ಸೋನು ಗಳಗಳನೆ ಅತ್ತಿದ್ದಾಳೆ. ಒಟ್ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಲವ್ ಶುರುವಾಗಿದ್ಯಾ? ಸೋನು ಹಾಗೂ ರಾಕೇಶ್ ನಡುವೆ ಇರುವುದು ಸ್ನೇಹಾನಾ? ಪ್ರೀತಿನಾ ಅನ್ನೋದು ಗೊತ್ತಾಗದೆ ಪ್ರೇಕ್ಷಕರು ಗೊಂದಲಗೊಂಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now