ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಫೋಟೋ ಶೂಟ್ ಕುರಿತು ಪ್ರತಿಕ್ರಿಯಿಸಿದ ಪ್ರಣೀತಾ ಸುಭಾಷ್: ಸಿನ್ಮಾ ಗಿನ್ಮಾ ಸದ್ಯಕ್ಕಿಲ್ಲ ಎಂದ ನಟಿ
ಬ್ಲಾಕ್ ಕಲರ್ ಟಾಪ್, ಅದರ ಮೇಲೆ ಗ್ರೀನ್ ಕಲರ್ ಬ್ಲೇಸರ್ ತೊಟ್ಟು ನಟಿ ಪ್ರಣೀತಾ ಸುಭಾಷ್ ಮಿಂಚಿದ್ದಾರೆ. ಪ್ರಣೀತಾರ ಗ್ಲಾಮರಸ್ ಫೋಟೋ ನೋಡಿ ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದರು. ಪ್ರಣೀತಾ ಫೋಟೋ ನೋಡಿದ ಅಭಿಮಾನಿಗಳು ಸದ್ಯದಲ್ಲೇ ಸಿನಿಮಾ ರಂಗಕ್ಕೆ ಬರ್ತಾರೆ ಎಂದಿದ್ದರು. ಇದಕ್ಕೆ ನಟಿ ಪ್ರಣೀತಾ ಪ್ರತಿಕ್ರಿಯೆ ನೀಡಿದ್ದಾರೆ.
“ಸದ್ಯಕ್ಕೆ ಮಗಳನ್ನು ನೋಡಿಕೊಳ್ಳುವುದರಲ್ಲೇ ಬಹಳ ಬ್ಯುಸಿಯಾಗಿದ್ದೀನಿ. ಸಿನಿಮಾ ಗಿನ್ಮಾ ಎಲ್ಲಾ ಸದ್ಯಕ್ಕಿಲ್ಲ. ಆ ಬಗ್ಗೆ ಇನ್ನು ಯೋಚಿಸಿಯೇ ಇಲ್ಲ” ಎಂದಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಗ್ಲಾಮರಸ್ ಫೋಟೊಗಳ ಬಗ್ಗೆ ಮಾತನಾಡಿದ ಪ್ರಣೀತಾ “ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಅದೇ ಸಮಯದಲ್ಲಿ ಒಂದಷ್ಟು ಫೋಟೊಗಳನ್ನು ಕ್ಲಿಕ್ಕಿಸಿ ಶೇರ್ ಮಾಡಿದ್ದೀನಿ. ಇತ್ತೀಚೆಗೆ ಕೊಂಚ ವರ್ಕೌಟ್ ಮಾಡಿ ಸಣ್ಣ ಆಗಿದ್ಧೀನಿ ಅಷ್ಟೆ. ಅಭಿಮಾನಿಗಳು ಫೋಟೊಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಹಳ ಖುಷಿಯಾಗುತ್ತಿದೆ” ಎಂದಿದ್ದಾರೆ.
