ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಜೊತೆ ಜೊತೆಯಲಿ ತಂಡದಿಂದ ಹೊಸ ನ್ಯೂಸ್: ಆರ್ಯವರ್ಧನ್ ಪಾತ್ರದಲ್ಲಿ ಮುಂದುವರೆಯುತ್ತಾರಾ ಅನಿರುದ್ಧ್
ಸದ್ಯದ ಮಾಹಿತಿ ಪ್ರಕಾರ ಆರ್ಯವರ್ಧನ್ ಜಾಗಕ್ಕೆ ಯಾರನ್ನೂ ಧಾರಾವಾಹಿ ತಂಡ ಕರೆತರುವುದಿಲ್ಲವಂತೆ. ಇನ್ನೆರಡು ತಿಂಗಳಲ್ಲಿ ಧಾರಾವಾಹಿ ಮುಗಿಯಲಿದ್ದು ಆರ್ಯವರ್ಧನ್ ಪಾತ್ರಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಅಲ್ಲದೆ ಹರೀಶ್ ರಾಜ್ ಧಾರಾವಾಹಿಯಲ್ಲಿ ನಟಿಸುತ್ತಿದ್ದರು ಅದು ಆರ್ಯವರ್ಧನ್ ಪಾತ್ರ ಅಲ್ಲ ಎನ್ನಲಾಗುತ್ತಿದೆ.
ಜೊತೆ ಜೊತೆಯಲಿ ತಂಡದಲ್ಲಿ ಅನಿರುದ್ದ್ ಹಾಗೂ ನಿರ್ದೇಶಕ ಆರೂರು ಜಗದೀಶ್ ನಡುವಿನ ಗಲಾಟೆ ಜಗಜ್ಜಾಹಿರಾಗಿದೆ. ಅಲ್ಲದೆ ಯಾವುದೇ ಕಾರಣಕ್ಕೆ ಅನಿರುದ್ಧ್ ಗೆ ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡುವುದಿಲ್ಲ ಎನ್ನಲಾಗುತ್ತಿದೆ. ಈ ಮಧ್ಯೆ ಅನಿರುದ್ಧ್ ಮಾತ್ರ ಮತ್ತೆ ಅವಕಾಶ ನೀಡಿದರೆ ನಟಿಸುವುದಾಗಿ ಒಪ್ಪಿಕೊಂಡಿದ್ದಾರೆ. ಇದೀಗ ಧಾರಾವಾಹಿ ತಂಡದ ನಡೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
