• February 10, 2026

ನಟಿ ಅನುಪಮಾ ಪರಮೇಶ್ವರನ್ ಗೆ ಕೊರೋನಾ ಪಾಸಿಟಿವ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಟಸಾರ್ವಭೌಮ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಹೃದಯ ಗೆದ್ದ ನಟಿ ಅನುಪಮಾ ಪರಮೇಶ್ವರನ್ ಗೆ ಕೊರೋನಾ ಸೋಂಕು ಧೃಢಪಟ್ಟಿದೆ. ಈ ವಿಷಯವನ್ನು ಸ್ವತಃ ಅನುಪಮಾ ಪರಮೇಶ್ವರನ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ತಮ್ಮ ಸಂಪರ್ಕಕ್ಕೆ ಬಂದವರನ್ನು ಕೋವಿಡ್ ಟೆಸ್ಟ್ ಗೆ ಒಳಪಡುವಂತೆ ಸೂಚಿಸಿದ್ದಾರೆ. ಕಾರ್ತಿಕೇಯ 2 ಸಿನಿಮಾದ ಯಶಸ್ಸಿನಲ್ಲಿರುವ ಅನುಮಪ ಅವರಿಗೆ ಜ್ವರ ಹಾಗೂ ಶೀತಾ ಕಾಣಿಸಿಕೊಂಡಿದೆ. ಈ ವೇಳೆ ಟೆಸ್ಟ್ ಗೆ ಒಳಗಾಗಿದ್ದು ಕೊರೋನಾ ಇರುವುದು ಧೃಢಪಟ್ಟಿದೆ. ಸತತ ಸೋಲುಗಳಿಂದ ಸೈಡ್ ಲೈನ್ ಆಗಿದ್ದ ನಟಿ ಅನುಪಮಾ ಇದೀಗ ಕಾರ್ತಿಕೇಯ2 ಯಶಸ್ಸಿನಿಂದ ಫುಲ್ ಖುಷಿಯಲ್ಲಿದ್ದಾರೆ. ಕಾರ್ತಿಕೇಯ 2 ಸಿನಿಮಾ ತೆಲುಗಿನ ಜೊತೆಗೆ ಹಿಂದಿಯಲ್ಲಿ ಭಾರಿ ಕಲೆಕ್ಷನ್ ಮಾಡಿದೆ. ಈ ಮೂಲಕ ಬಾಲಿವುಡ್ ಸ್ಟಾರ್ ನಟ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಹಿಂದಿಕ್ಕಿದೆ. ಸದ್ಯದಲ್ಲೇ ಈ ಸಿನಿಮಾ 100 ಕೋಟಿ ಕ್ಲಬ್ ಸೇರಲಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now