ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮಾನ್ವಿತಾ ಕಾಮತ್ ತಾಯಿಯ ಸಹಾಯಕ್ಕೆ ಧಾವಿಸಿದ ಸೋನು ಸೂದ್: ರಿಯಲ್ ಹೋರೋ ಎಂದು ನಟಿ
ಮಾನ್ವಿತಾ ತಾಯಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ನುರಿತ ವೈದ್ಯರ ಸಲಹೆ ನೀಡುವಂತೆ ಮಾನ್ವಿತಾ ತಮ್ಮ ವಾಟ್ಸಪ್ ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದರು. ಇದನ್ನು ಗಮನಿಸಿದ ಮಂಗಳೂರು ಮೂಲದ ಸೋನು ಸೋದ್ ಫೌಂಡೇಶನ್ ಕಾರ್ಯಕರ್ತರೊಬ್ಬರು ಮಾನ್ವಿತಾರನ್ನು ಸಂಪರ್ಕಿಸಿದ್ದು ಸೋನು ಸೂದ್ ಫೌಂಡೇಶನ್ ಮೂಲಕ ಸಹಾಯ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿದ ಮಾನ್ವಿತಾ ಕಾಮತ್, . “ಈಗಷ್ಟೇ ಸೋನು ಸೂದ್ ಸರ್ ಜೊತೆಗೆ ಮಾತನಾಡಿದೆ. ಅವರು ನನ್ನ ತಾಯಿಗಾಗಿ ಮಾಡಿದ ಸಹಾಯಕ್ಕೆ ನಾನು ಮನಸಾರೆ ಧನ್ಯವಾದವನ್ನು ತಿಳಿಸುತ್ತೇನೆ. ನೀವು ನಿಜವಾಗಿಯೂ ಹೀರೋ ಸರ್. ಎಲ್ಲದಕ್ಕೂ ಧನ್ಯವಾದಗಳು” ಎಂದು ಮಾನ್ವಿತಾ ಕಾಮತ್ ತಮ್ಮ ಟ್ವೀಟ್‌ನಲ್ಲಿ ಬರೆದು ನಟ ಸೋನು ಸೂದ್ ಟ್ಯಾಗ್ ಮಾಡಿದ್ದಾರೆ.
Justttt spoke to @SonuSood sir and thanked him personally for alll that he did for my mother. You are truly a hero,sir. Thank you so much for everything! 🙏🙏
— Manvita Kamath (@manvitakamath) August 24, 2022
