• March 16, 2026

2 ವರ್ಷಗಳ ಬಳಿಕ ಇಂಡಿಯನ್ 2 ಚಿತ್ರೀಕರಣ ಪುನರಾರಂಭ

ಕಮಲ್ ಹಾಸನ್ ನಟನೆಯ ಬಹು ನಿರೀಕ್ಷಿತ ಇಂಡಿಯನ್ 2 ಸಿನಿಮಾದ ಚಿತ್ರೀಕರಣ ಕೆಲವೊಂದು ಕಾರಣಗಳಿಂದ ವಿಳಂಭವಾಗಿತ್ತು. ಕೆಲ ಭಾಗಗಳನ್ನು ಚಿತ್ರೀಕರಿಸಿದ್ದ ಚಿತ್ರತಂಡ ಅರ್ಧಕ್ಕೆ ನಿಲ್ಲಿಸಿತ್ತು. ಇದೀಗ ಎರಡು ವರ್ಷಗಳಿಂದ ನಿಂತಿದ್ದ ಇಂಡಿಯನ್ 2 ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು ಕಮಲ್ ಹಾಸನ್ ರ ಹೊಸ ಲುಕ್ ರಿವೀಲ್ ಮಾಡುವ ಮೂಲಕ ಚಿತ್ರತಂಡ ಅಧಿಕೃತ ಮಾಹಿತಿ ನೀಡಿದೆ. ಅಂದುಕೊಂಡಂತೆ ಆಗಿದ್ದಿದ್ದರೆ ಇಷ್ಟರಲ್ಲಾಗಲೇ ಸಿನಿಮಾ ಕಂಪ್ಲೀಟ್ ಆಗಬೇಕಿತ್ತು. ಆದರೆ ಚಿತ್ರೀಕರಣ ಸಂದರ್ಭದಲ್ಲಿ ಸೆಟ್ ನಲ್ಲಿ ಕ್ರೇನ್ ಬಿದ್ದು ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಅದರ ಜೊತೆಗೆ ಕೋವಿಡ್ ಹೆಚ್ಚಳದಿಂದ ಲಾಕ್ ಡೌನ್ ಕೂಡ ಘೋಷಣೆಯಾಯಿತು. ಈ ಎಲ್ಲಾ ಕಾರಣಗಳಿಂದ ಕಳೆದ ಎರಡು ವರ್ಷಗಳಿಂದ ಸೈಲೆಂಟ್ ಆಗಿದ್ದ ಇಂಡಿಯನ್ ಸಿನಿಮಾಗೆ ಮತ್ತೆ ಚಾಲನೆ ಸಿಕ್ಕಿದೆ. ಕಮಲ್ ಹಾಸನ್ ರ ಇಂಡಿಯನ್ 2 ಸಿನಿಮಾ ಪೋಸ್ಟರ್ ಅನ್ನು ನಿರ್ದೇಶಕ ಶಂಕರ್ ಹಂಚಿಕೊಂಡಿದ್ದಾರೆ. ಜೊತೆಗೆ ‘ಶುಭೋದಯ ಭಾರತೀಯರೇ, ಇಂಡಿಯನ್ 2 ಸಿನಿಮಾ ಸಂಬಂಧ ಉಳಿದಿರುವ ಚಿತ್ರೀಕರಣ ಇಂದು ಪ್ರಾರಂಭವಾಗುತ್ತಿದೆ ಎಂದು ಘೋಷಿಸಲು ನಮಗೆ ಸಂತೋಷವಾಗಿದೆ. ನಿಮ್ಮೆಲ್ಲರ ಬೆಂಬಲ ಮತ್ತು ಶುಭಾಶಯಗಳು ಬೇಕು’ ಎಂದು ಬರೆದುಕೊಂಡಿದ್ದಾರೆ. 1996ರಲ್ಲಿ ಇಂಡಿಯನ್ ಸಿನಿಮಾ ರಿಲೀಸ್ ಆಗಿತ್ತು. ಬಾಕ್ಸ್ ಆಫೀಸನಲ್ಲಿ ಭಾರೀ ಗಳಿಕೆ ಮಾಡಿತ್ತು. ಆನಂತರ ಇಂಡಿಯನ್ 2 ಸಿನಿಮಾ ಮಾಡುವ ವಿಚಾರ ಬಂತು. 24 ವರ್ಷಗಳ ಬಳಿಕೆ ಇಂಡಿಯನ್ ಸಿಕ್ವೆಲ್ ಸಿನಿಮಾ ಬರುತ್ತಿದ್ದು, ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ಆಗಿದೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now