• January 1, 2026

ಚಿರಂಜೀವಿ ಹುಟ್ಟುಹಬ್ಬಕ್ಕೆ ಗಾಡ್ ಫಾದರ್ ಗಿಫ್ಟ್: ಮೆಗಾಸ್ಟಾರ್ ಜೊತೆ ಸೂಪರ್ ಸ್ಟಾರ್ ಎಂಟ್ರಿ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿಗೆ ಇಂದು 67ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಚಿರಂಜೀವಿಗೆ ಅಭಿಮಾನಿಗಳು, ಸಿನಿಮಾ ನಟ, ನಟಿಯರು, ರಾಜಕೀಯ ಗಣ್ಯರು ಸೇರಿದಂತೆ ಸಾಕಷ್ಟು ಮಂದಿ ಶುಭ ಹಾರೈಸಿದ್ದಾರೆ. ಮೆಗಾಸ್ಟಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬಹುನಿರೀಕ್ಷಿತ ಗಾಡ್ ಫಾದರ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಗಾಡ್ ಫಾದರ್ ಮಲಯಾಳಂನ ಸೂಪರ್ ಹಿಟ್ ಲೂಸಿಫರ್ ಸಿನಿಮಾದ ರಿಮೇಕ್ ಆಗಿದ್ದು ದೊಡ್ಡ ಮಟ್ಟದಲ್ಲಿ ಸಕಸ್ಸ್ ಆಗಿತ್ತು. ಆದರೂ ಕೂಡ ಚಿರಂಜೀವಿಯ ಗಾಡ್ ಫಾದರ್ ಸಿನಿಮಾದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಲೂಸಿಫರ್ ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ಮೋಹನ್ ಲಾಲ್ ಪ್ರಮುಖ  ಪಾತ್ರದಲ್ಲಿ ಕಾಣಿಸಿಕೊಂಡಿದ್ರೆ ಗಾಡ್ ಫಾದರ್ ಚಿತ್ರದಲ್ಲಿ ಚಿರಂಜೀವಿ ಬಣ್ಣ ಹಚ್ಚಿದ್ದಾರೆ. ಗಾಡ್ ಫಾದರ್ ಸಿನಿಮಾದ ವಿಶೇಷ ಪಾತ್ರದಲ್ಲಿ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟೀಸರ್‌ನಲ್ಲಿ ಸಲ್ಮಾನ್ ಖಾನ್ ದರ್ಶನ ಕೂಡ ಆಗಿದೆ. ಮೆಗಾಸ್ಟಾರ್ ಜೊತೆ ಎಂಟ್ರಿ ಕೊಟ್ಟಿರುವ ಸಲ್ಮಾನ್ ಖಾನ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮೋಹನ್ ರಾಜಾ ನಿರ್ದೇಶನದಲ್ಲಿ ಮೂಡಿ ಬಂದಿರುವ ಗಾಡ್ ಫಾದರ್ ಸಿನಿಮಾದಲ್ಲಿ ಚಿರಂಜೀವಿಗೆ ಜೋಡಿಯಾಗಿ ನಯನತಾರಾ ಬಣ್ಣ ಹಚ್ಚಿದ್ದಾರೆ.  ‘ಗಾಡ್​ ಫಾದರ್​’ ಸಿನಿಮಾ ಮೇಲೆ ಅಭಿಮಾನಿಗಳು ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಿಂದಿ ಮತ್ತು ತೆಲುಗು ವರ್ಷನ್​ನಲ್ಲಿ ಟೀಸರ್​ ಬಿಡುಗಡೆ ಮಾಡಲಾಗಿದೆ. ಸದ್ಯ ಬಿಡುಗಡೆ ಆಗಿರುವ ಟೀಸರ್ 70 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ‘ಗಾಡ್​ ಫಾದರ್​’ ಸಿನಿಮಾ ಈ ವರ್ಷ ವಿಜಯ ದಶಮಿ ಹಬ್ಬದ ಪ್ರಯುಕ್ತ ಅಕ್ಟೋಬರ್​ 5ರಂದು ಬಿಡುಗಡೆ ಆಗಲಿದೆ. ‘ಬೋಲಾ ಶಂಕರ್​’ ಚಿತ್ರದಲ್ಲೂ ಚಿರಂಜೀವಿ ನಟಿಸುತ್ತಿದ್ದು 2023ರ ಏಪ್ರಿಲ್​ 14ರಂದು ಆ ಸಿನಿಮಾ ಬಿಡುಗಡೆ ಆಗಲಿದೆ.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now