ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಹಿರಿಯ ಗಾಯಕಿ ‘ಬುಲ್ ಬುಲ್ ಎ ಪಾಕಿಸ್ತಾನ್’ ಖ್ಯಾತಿಯ ನಯ್ಯಾರ ನೂರ್ ನಿಧನ
ನನ್ನ ಪ್ರೀತಿಯ ಚಿಕ್ಕಮ್ಮ ನಯ್ಯಾರ ನೂರ್ ಅವರ ನಿಧನವನ್ನು ನಾನು ಭಾರವಾದ ಹೃದಯದಿಂದ ಘೋಷಿಸುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಸುಮಧುರ ಕಂಠಕ್ಕಾಗಿ ‘ಬುಲ್‌ಬುಲ್-ಎ-ಪಾಕಿಸ್ತಾನ’ ಎಂಬ ಬಿರುದು ನೀಡಲಾಗಿತ್ತು ಎಂದು ಜೈದಿ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಯ್ಯಾರ್ ಅವರ ನಿಧನವು ಸಂಗೀತ ಜಗತ್ತಿಗೆ ತುಂಬಲಾರದ ನಷ್ಟವುಂಟು ಮಾಡಿದೆ. ಗಜಲ್ ಇರಲಿ, ಗೀತೆಯೇ ಇರಲಿ ನಯ್ಯಾರ ನೂರ್ ಏನೇ ಹಾಡಿದರೂ ಅಚ್ಚುಕಟ್ಟಾಗಿ ಹಾಡುತ್ತಿದ್ದರು. ಸಂಗೀತ ಕ್ಷೇತ್ರಕ್ಕೆ ಶೂನ್ಯ ಆವರಿಸಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಸಂತಾಪ ಸೂಚಿಸಿದ್ದಾರೆ.
ಭಾರತದ ಅಸ್ಸಾಂ ರಾಜ್ಯದಲ್ಲಿ ಹುಟ್ಟಿದ ನಯ್ಯಾರ ನೂರ್ ಬಳಿಕ ಕುಟುಂಬದೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋದರು. ಸಣ್ಣ ವಯಸ್ಸಿನಲ್ಲೇ ಸಂಗೀತದ ಕುರಿತು ಅದಮ್ಯ ಆಸಕ್ತಿ ಹೊಂದಿದ್ದ ನಯ್ಯಾರ ನೂರ್ 1968ರಲ್ಲಿ ಮೊದಲ ಬಾರಿಗೆ ರೇಡಿಯೋದಲ್ಲಿ ಹಾಡುವ ಮೂಲಕ ಸದ್ದು ಮಾಡಿದರು. ಮೃತ ನಯ್ಯಾರ್ ನೂರ್ ಪತಿ ಶೆಹರ್ಯಾರ್ ಜೈದಿ ಮತ್ತು ಇಬ್ಬರು ಪುತ್ರರಾದ ಅಲಿ, ಜಾಫರ್ ಅವರನ್ನು ಅಗಲಿದ್ದಾರೆ.
