ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
17 Years of Jogi: ದಾಖಲೆ ಮೇಲೆ ದಾಖಲೆ ಬರೆದ ‘ಜೋಗಿ’ ಜಾತ್ರೆಗೆ 17 ವರ್ಷಗಳ ಸಂಭ್ರಮ
ಶಿವರಾಜ್ಕುಮಾರ್ ಅವರ ವೃತ್ತಿಜೀವನದ ಅತಿ ಮುಖ್ಯ ಸಿನಿಮಾಗಳಲ್ಲಿ ‘ಜೋಗಿ’ ಚಿತ್ರಕ್ಕೆ ಪ್ರಮುಖ ಸ್ಥಾನವಿದೆ. ಈ ಸಿನಿಮಾ ನೋಡಿ ಡಾ. ರಾಜ್ಕುಮಾರ್, ರಜನಿಕಾಂತ್ ಮುಂತಾದ ದಿಗ್ಗಜರು ಮೆಚ್ಚಿಕೊಂಡಿದ್ದರು. ಜೋಗಿ ಅಂದಾಕ್ಷಣ…..ತಾಯಿ-ಮಗನ ಮಮತೆ, ರೌಡಿಸಂ, ಸೂಪರ್ ಹಿಟ್ ಗೀತೆಗಳು..ಜೋಗಿ ಅಲಿಯಾಸ್ ಮಾದೇಶ, ಬಿಡ್ಡ, ಪಟ್ರೆ, ಕೋಟೆ ಸಿದ್ದ, ಪುಂಗ ಪಾತ್ರಗಳು ಥಟ್ ಅಂತ ನೆನಪಾಗುತ್ತೆ.
ಅದು 2005ರ ಆಗಸ್ಟ್ ತಿಂಗಳು. ಇಡೀ ಕರ್ನಾಟಕವೇ ‘ಜೋಗಿ’ ಸಿನಿಮಾಗಾಗಿ ಕಾಯುತ್ತಿತ್ತು. ಅದಾಗಲೇ ಬಿಡುಗಡೆ ಆಗಿದ್ದ ಹಾಡುಗಳು ಧೂಳೆಬ್ಬಿಸಿದ್ದವು. ಶಿವರಾಜ್ಕುಮಾರ್ ಅವರ ವಿಭಿನ್ನ ಗೆಟಪ್ಗಳು ಪೋಸ್ಟರ್ಗಳಲ್ಲಿ ರಾರಾಜಿಸಿದ್ದವು. ಕರಿಯ, ಎಕ್ಸ್ಕ್ಯೂಸ್ಮೀ ಸಿನಿಮಾಗಳನ್ನು ನಿರ್ದೇಶಿಸಿದ್ದ ಪ್ರೇಮ್ ಅವರ ಚಿತ್ರ ಎಂಬ ಕಾರಣಕ್ಕೂ ‘ಜೋಗಿ’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿತ್ತು. ಆ.19ರಂದು ಅದ್ದೂರಿಯಾಗಿ ಚಿತ್ರ ತೆರೆಕಂಡಿತು. ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನೂ ಮೀರಿ ಆ ಚಿತ್ರ ಯಶಸ್ಸು ಕಂಡಿತು. ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆಯಿತು. ಆಗ ಜನರ ಕ್ರೇಜ್ ಯಾವ ಮಟ್ಟಿಗೆ ಇತ್ತು ಎಂದರೆ, ಅದನ್ನು ‘ಜೋಗಿ ಜಾತ್ರೆ’ ಎಂದೇ ಕರೆಯಲಾಗುತ್ತಿತ್ತು. ಅಂಥ ಅಭೂತಪೂರ್ವ ಯಶಸ್ಸು ಕಂಡ ಸಿನಿಮಾ ಬಿಡುಗಡೆಯಾಗಿ ಇಂದಿಗೆ 17 ವರ್ಷ ಪೂರೈಸಿದೆ.

ಜೋಗಿ ಮಾಡಿದ ಕಲೆಕ್ಷನ್ ಎಷ್ಟು?

ಬೆಂಗಳೂರಿನ 16 ಕೇಂದ್ರಗಳಲ್ಲಿ ಸೆಂಚುರಿ
ಬೆಂಗಳೂರಿನ 16 ಚಿತ್ರಮಂದಿರಗಳಲ್ಲಿ ಜೋಗಿ ಸಿನಿಮಾ ಶತದಿನ ಆಚರಿಸಿಕೊಂಡಿತ್ತು. ಇದು ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ. ಜೋಗಿ ಸಿನಿಮಾ ಬಿಟ್ಟರೆ ಬೇರೆ ಯಾವ ಚಿತ್ರವೂ ಸಿಲಿಕಾನ್ ಸಿಟಿಯಲ್ಲಿ 16 ಕೇಂದ್ರದಲ್ಲಿ ಶತದಿನ ಪೂರೈಸಿಲ್ಲ. 72 ಕೇಂದ್ರಗಳಲ್ಲಿ 25 ದಿನ ಪೂರೈಸಿ, 63 ಕೇಂದ್ರಗಳಲ್ಲಿ 50 ದಿನ ಪೂರೈಸಿ, 54 ಕೇಂದ್ರಗಳಲ್ಲಿ 75 ದಿನ ಪ್ರದರ್ಶನ ಕಂಡು, 45 ಕೇಂದ್ರಗಳಲ್ಲಿ (61ಕ್ಕೂ ಹೆಚ್ಚು ಚಿತ್ರಮಂದಿರ) 100 ದಿನ ಪೂರೈಸಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ವೀರೇಶ್ ಚಿತ್ರಮಂದಿರದಲ್ಲಿ 50 ದಿನದವರೆಗೂ ಹೌಸ್‌ಪುಲ್ ಪ್ರದರ್ಶನ ಕಂಡಿತ್ತು ಎನ್ನುವುದು ವಿಶೇಷ.
