• February 10, 2026

ಅರ್ಜುನ್ ಕಪೂರ್ ಸಾರ್ವಜನಿಕರಿಗೆ ಬೆದರಿಕೆ ಹಾಕುವ ಬದಲು ನಟನೆ ಬಗ್ಗೆ ಗಮನ ಕೊಡಲಿ: ನರೋತ್ತಮ್ ಮಿಶ್ರಾ

ಬಾಲಿವುಡ್ ಸಿನಿ ರಂಗಕ್ಕೆ ಬಾಯ್ ಕಾಟ್ ಬಿಸಿ ತಾಗಿದೆ. ಕೋವಿಡ್ ಸಂದರ್ಭದಲ್ಲಿ ಸೈಲೆಂಟ್ ಆಗಿದ್ದ ಬಿಟೌನ್ ಮತ್ತೆ ಮೇಲೆಳಲೆ ಇಲ್ಲ. ಇತ್ತೀಚೆಗೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ ಕಾಟ್ ಗೆ ಬಲಿಯಾಗಿದೆ. ಇದರ ಜೊತೆಗೆ ಇನ್ನೂ ಹಲವು ಸಿನಿಮಾಗಳನ್ನು ಬಹಿಷ್ಕರಿಸಬೇಕು ಎಂಬ ಕೂಗು ಕೇಳಿ ಬಂದಿದ್ದು ಇದರ ವಿರುದ್ಧ ನಟ ಅರ್ಜುನ್ ಕಪೂರ್ ಅಸಮಾಧಾನ ಹೊರ ಹಾಕಿದ್ದಾರೆ. ಸಿನಿಮಾ ರಂಗದಲ್ಲಿ ಬಾಯ್ ಕಾಟ್ ಬೆಳಯಲು ಬಿಡಬಾರದು. ಚಿಗುರಿನಲ್ಲೇ ಚಿವುಟಿ ಹಾಕಬೇಕು. “ನಾವು ತುಂಬ ಸಮಯದಿಂದ ಮೌನವಾಗಿದ್ದು ತಪ್ಪು ಮಾಡಿದೆವು. ನಮ್ಮ ಶಿಸ್ತನ್ನು ವೀಕ್‌ನೆಸ್‌ ಆಗಿ ಪರಿಗಣಿಸಲಾಗಿದೆ. ನಾವು ತುಂಬ ಸಹಿಸಿಕೊಂಡಿದ್ದು, ಅದನ್ನೇ ಜನರು ಬಳಸಿಕೊಂಡಿದ್ದಾರೆ. ನಾವೆಲ್ಲ ಒಟ್ಟಾಗಿ ಪ್ರಾಮಾಣಿಕತೆಯಿಂದ ಏನಾದರೂ ಮಾಡಬೇಕು. ಈಗ ಏನು ಬರೆಯಲಾಗುತ್ತಿದೆಯೋ, ಏನು ಹ್ಯಾಶ್‌ಟ್ಯಾಗ್ ಕ್ರಿಯೇಟ್ ಮಾಡಲಾಗುತ್ತಿದೆಯೋ ಅದು ರಿಯಾಲಿಟಿಯಿಂದ ತುಂಬ ದೂರ ಇದೆ” ಎಂದು ಅರ್ಜುನ್ ಕಪೂರ್ ಅಸಮಧಾನ ಹೊರ ಹಾಕಿದ್ದರು. ಅರ್ಜುನ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ನರೋತ್ತಮ್ ಮಿಶ್ರಾ, “ನಟ ಅರ್ಜುನ್ ಕಪೂರ್ ಅವರು ಸಮಾಜಕ್ಕೆ ಧಮ್‌ಕಿ ಹಾಕೋದು ಸರಿಯಲ್ಲ. ಸಾರ್ವಜನಿಕರಿಗೆ ಬೆದರಿಕೆ ಹಾಕುವ ಬದಲು, ನಟನೆ ಬಗ್ಗೆ ಗಮನ ಕೊಡಲಿ. ತಮ್ಮ ಸಿನಿಮಾಗಳಲ್ಲಿ ಹಿಂದೂ ಧರ್ಮವನ್ನು ಗುರಿಯಾಗಿಟ್ಟುಕೊಂಡು ಕೆಲ ಗ್ಯಾಂಗ್ ಸಾರ್ವಜನಿಕರಿಗೆ ಬಾಯ್ಕಾಟ್ ವಿಚಾರವಾಗಿ ಬೆದರಿಕೆಯನ್ನು ಏಕೆ ಹಾಕುತ್ತಾರೆ?” ಎಂದು ಪ್ರಶ್ನೆ ಮಾಡಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now