• January 1, 2026

ಥಿಯೇಟರ್ ನಲ್ಲಿ ಮುತ್ತಿಟ್ಟ ಅಭಿಮಾನಿಗೆ ಧನ್ಯವಾದ ಹೇಳಿದ ಯೋಗರಾಜ್ ಭಟ್

ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಅಭಿಮಾನಿಗಳು ಮುಗಿಬಿದ್ದು ಥಿಯೇಟರ್ ಬಂದು ಸಿನಿಮಾ ನೋಡ್ತಿದ್ದಾರೆ. ಇದೇ ಖುಷಿಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಮಾಡಿದ್ದು ಸಿನಿಮಾ ಗೆಲ್ಲಿಸಿದ ಪ್ರೇಕ್ಷಕರಿಗೆ ಭಟ್ರು ಧನ್ಯವಾದ ಹೇಳಿದ್ದಾರೆ. ಮುಖ್ಯವಾಗಿ ಥಿಯೇಟರ್ ಮುಂದೆ ಮುತ್ತಿಟ್ಟ ಪುಣ್ಯಾತ್ಮನಿಗೂ ಧನ್ಯವಾದ ಎಂದಿದ್ದಾರೆ. ಇದೇ ಶುಕ್ರವಾರ ತೆರೆಗೆ ಬಂದ ಗಾಳಿಪಟ 2 ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ಬಿಡುಗಡೆ ದಿನ ಅಭಿಮಾನಿಗಳು ಥಿಯೇಟರ್ ಮುಂದೆ ಜೋರಾಗಿಯೇ ಸೆಲೆಬ್ರೇಷನ್ ಮಾಡಿದ್ದಾರೆ. ಈ ಸಂಭ್ರಮದಲ್ಲಿ ನಿರ್ದೇಶಕ ಯೋಗರಾಜ್ ಭಟ್ ಕೂಡ ಭಾಗಿಯಾಗಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ಭಟ್ಟರಿಗೆ ಮುತ್ತಿಟ್ಟ ಪ್ರಸಂಗವೂ ನಡೆದಿದೆ. ಭಟ್ಟರಿಗೆ ಅಭಿಮಾನಿಯೊಬ್ಬ ಮುತ್ತಿಟ್ಟಿದ್ದರು.  ಇದೇ ವೇಳೆ ಮತ್ತೊಬ್ಬ ಅಭಿಮಾನಿ ಇದನ್ನು ವಿಡಿಯೋ ಮಾಡಿದ್ದರು. ಅಷ್ಟು ಸಾಲದು ಎಂಬಂತೆ ಇದೇ ವಿಚಾರವಾಗಿ ಅಪ್ಪನನ್ನು ಭಟ್ರು ಮಗಳು ಕಿಚಾಯಿಸಿದ್ದರು. ಈ ಕುರಿತು ಭಟ್ರ ಮಗಳು ಪುನರ್ವಸು ಒಂದು ಫನ್ನಿ ವಿಡಿಯೋ ಕೂಡ ಮಾಡಿದ್ದರು. ಅದನ್ನು ಗೋಲ್ಡನ್ ಸ್ಟಾರ್ ಗಣೇಶ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದರು. ಅದು ಸಿಕ್ಕಾಪಟ್ಟೆ ವೈರಲ್‌ ಆಗಿದೆ. ‘ಗಾಳಿಪಟ-2’ ಸಿನಿಮಾ ಸಕ್ಸಸ್‌ ಮೀಟ್‌ ವೇದಿಕೆಯಲ್ಲಿ ಮಾತನಾಡಿರುವ ಯೋಗರಾಜ್‌ ಭಟ್ರು , “ಮುತ್ತಿಟ್ಟ ಪುಣ್ಯಾತ್ಮನಿಗೆ, ತಮಟೆ ಕೊಟ್ಟ ಪುಣ್ಯಾತ್ಮನಿಗೆ ಸಣ್ಣ ವಿಡಿಯೋ ಮಾಡಿದ ಮಗಳಿಗೆ ಧನ್ಯವಾದ” ಎಂದು ಹೇಳಿದ್ದಾರೆ. ಯೋಗರಾಜ್ ಭಟ್ ಹಾಗೂ ಗಣೇಶ್ ಕಾಂಬಿನೇಷನ್ ನ ಗಾಳಿಪಟ 2 ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತಿದೆ. ದೇಶ ವಿದೇಶದಲ್ಲಿ ಸಿನಿಮಾ ಸದ್ದು ಮಾಡ್ತಿದ್ದು ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಗೋಲ್ಡನ್ ಸ್ಟಾರ್ ಗಣೇಶ್ ಸೋಷಿಯಲ್ ಮೀಡಿಯಾದಲ್ಲಿ ಪತ್ರ ಬರೆದು ಸಿನಿಮಾದ ಸಕ್ಸಸ್ ಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now