ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮತ್ತೋರ್ವ ನಟನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ ನಿರ್ದೇಶಕ ಶಶಾಂಕ್
ಲವ್ 360 ಚಿತ್ರದ ನಟ ಪ್ರವೀಣ್ ಮೂಲತಃ ಹೊಸಪೇಟೆಯವರು. ಈಗಾಗಲೇ ವೈದ್ಯಕೀಯ ಪದವಿ ಮುಗಿಸಿರುವ ಅವರು ಬಹಳ ವರ್ಷಗಳಿಂದ ನಟರಾಗಬೇಕು ಎಂಬ ಕನಸು ಕಂಡವರು. ವಿಶಾಖಪಟ್ಟಣದಲ್ಲಿ ನಟನಾ ತರಬೇತಿ, ಬೆಂಗಳೂರಿನ ಆದರ್ಶ ಇನ್ಸ್ಟಿಟ್ಯೂಟ್ನಲ್ಲಿ, ಜಿ ಅಕಾಡೆಮಿಯಲ್ಲಿ ಹೀಗೆ ಹಲವು ಕಡೆಗಳಲ್ಲಿ ತರಬೇತಿ ಪಡೆದುಕೊಂಡಿದ್ದು, ಇದೀಗ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.
ಈಗಾಗಲೇ ರಿಲೀಸ್ ಆಗಿರುವ ಲವ್ 360 ಸಿನಿಮಾದ ಟ್ರೈಲರ್ ಗಮನ ಸೆಳೆದಿದೆ. ಹಾಡುಗಳನ್ನು ಕೇಳುಗರು ಮೆಚ್ಚಿಕೊಂಡಿದ್ದಾರೆ. ಈ ಸಿನಿಮಾ ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾಗಳ ಸಾಲಿನಲ್ಲಿ ಇರಲಿದೆ ಎನ್ನುವುದು ಸ್ಯಾಂಡಲ್ ವುಡ್ ಸಿನಿ ಪಂಡಿತರ ಲೆಕ್ಕಾಚಾರ. ಒಟ್ನಲ್ಲಿ ಶಶಾಂಕ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಹೊಸ ನಾಯಕನ ಎಂಟ್ರಿಯಾಗುತ್ತಿದ್ದು ಚಿತ್ರದ ಮೇಲೆ ಸಾಕಷ್ಟು ಇದೆ.
