ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸೋಷಿಯಲ್ ಮೀಡಿಯಾದಲ್ಲಿ ಗುಡ್ ನ್ಯೂಸ್ ಹಂಚಿಕೊಂಡ ಬಿಪಾಶಾ ಬಸು: ಮೊದಲ ಮಗುವಿನ ಆಗಮನದ ಖುಷಿಯಲ್ಲಿ ಹಾಟ್ ಬ್ಯೂಟಿ
ಈ ಮೊದಲು ಬಿಪಾಶಾ ಪ್ರಗ್ನೆಂಟ್ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಬಿಪಾಶಾ ಆಗಲಿ ಅಥವಾ ಪತಿ ಕರಣ್ ಗ್ರೋವರ್ ಆಗಲಿ ಯಾವುದೇ ಮಾಹಿತಿ ಬಹಿರಂಗ ಪಡಿಸಿರಲಿಲ್ಲ. ಇದೀಗ ಬಿಪಾಶಾ ಪತಿ ಜೊತೆಗೆ ತೆಗೆಸಿಕೊಂಡಿರುವ ಬೇಬಿ ಬಂಪ್ ಫೋಟೋದ ಮೂಲಕ ವಿಷಯ ತಿಳಿಸಿದ್ದಾರೆ.
ಸಿನಿಮಾಗಳಲ್ಲಿ ಸಾಕಷ್ಟು ಅವಕಾಶಗಳು ಅರಸಿ ಬರುತ್ತಿರುವಾಗಲೆ ಬಿಪಾಶಾ ಬಸು, 2016ರಲ್ಲಿ ಸಹನಟ ಕರಣ್ ಸಿಂಗ್ ಗ್ರೋವರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಒಬ್ಬರನೊಬ್ಬರು ಪ್ರೀತಿಸಿ ಗುರುಹಿರಿಯರ ಸಮ್ಮತಿಯ ಮೇರೆಗೆ ಹಸೆಮಣೆ ಏರಿದ್ದರು. ಮದುವೆಯಾಗಿ ಆರು ವರ್ಷದ ಬಳಿಕ ಬಿಪಾಶಾ ದಂಪತಿಗಳು ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.
