ದೇಶದಾದ್ಯಂತ 75ನೇ ಸ್ವಾತಂತ್ರ್ಯೋತ್ಸವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರುವ ಹರ್ ಘರ್ ತಿರಾಂಗ ಅಭಿಯಾನಕ್ಕೆ ದೇಶದ ಜನ ಸಾಥ್ ನೀಡಿದ್ದು, ಮನೆ ಮನದಲ್ಲೂ ತ್ರಿವರ್ಣ ಧ್ವಜ ಹಾರುತ್ತಿದೆ. ಇದೇ ಸಮಯದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ವೀರರನ್ನು ಸ್ಮರಿಸಲಾಗುತ್ತಿದೆ.
ವಂದೇ ಮಾತರಂ ವಿಶೇಷ ಗೀತೆಯ ಮೂಲಕ ದೇಶಕ್ಕೆ ಗೌರವ ಸಲ್ಲಿಸಲಾಗಿದೆ. ವಂದೇ ಮಾತರಂ’ ಹಾಡಿನ ಮೂಲಕ ಕನ್ನಡ ನಟರು ಒಂದಾಗಿದ್ದು ಈ ಗೀತೆಯಲ್ಲಿ ಮುಖ್ಯಮಂತ್ರಿ ಬಸರವಾಜ ಬೊಮ್ಮಾಯಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಟ್ವೀಟರ್ ಖಾತೆಯಲ್ಲಿ ಈ ಗೀತೆಯನ್ನು ಹಂಚಿಕೊಂಡಿರುವ ಸಿಎಂ, ‘ವಂದೇ ಮಾತರಂ… ಕನ್ನಡದ ಸಾಧಕರಿಂದ ತಾಯಿ ಭಾರತಿಗೆ ಅರ್ಪಣೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿಬಂದಿರುವ ಈ ಗೀತೆಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಕಿಚ್ಚ ಸುದೀಪ್, ಶಿವರಾಜ್ಕುಮಾರ್, ಜಗ್ಗೇಶ್, ರಮೇಶ್ ಅರವಿಂದ್, ಅನಂತ್ ನಾಗ್, ಧ್ರುವ ಸರ್ಜಾ, ಶ್ರೀಮುರಳಿ, ರಿಷಬ್ ಶೆಟ್ಟಿ, ರವಿಚಂದ್ರನ್, ಗಣೇಶ್, ಧನಂಜಯ್ ಇನ್ನು ಕೆಲ ನಟರು ಕಾಣಿಸಿಕೊಂಡಿದ್ದಾರೆ. ಇವರ ಜೊತೆಗೆ ಸಾಲುಮರದ ತಿಮ್ಮಕ್ಕ, ವೆಂಕಟೇಶ್ ಪ್ರಸಾದ್, ಎಸ್.ಎಲ್. ಬೈರಪ್ಪ ಸೇರಿದಂತೆ ಇನ್ನೂ ಕೆಲವರು ಕಾಣಿಸಿಕೊಂಡಿದ್ದಾರೆ.

ಈ ವಿಡಿಯೋ ನೋಡಿ ಸುದೀಪ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಹಿಂದೆ ಕೊವಿಡ್ ಸಂದರ್ಭದಲ್ಲಿ ಜಾಗೃತಿ ಮೂಡಿಸಲು ಬದಲಾಗು ನೀನು ಎಂಬ ಜಾಗೃತಿ ವಿಡಿಯೋವನ್ನು ಸರ್ಕಾರ ಮಾಡಿತ್ತು. ಆದರೆ ಇದರಲ್ಲಿ ಸುದೀಪ್ ಅವರನ್ನು ಮರೆತು ಬಿಟ್ಟಿದ್ದರು ಎಂದು ಅಭಿಮಾನಿಗಳು ಬೇಸರ ಹೊರ ಹಾಕಿದ್ದರು. ಆದರೆ ಇದೀಗ ವಂದೇ ಮಾತರಂ ವಿಡಿಯೋದಲ್ಲೇ ಮೊದಲೇ ತೋರಿಸಿರೋದು ಕಿಚ್ಚನ ಅಭಿಮಾನಿಗಳಿಗೆ ಖುಷಿ ನೀಡಿದೆ.

ಇದರ ಜೊತೆಗೆ ವಂದೇ ಮಾತರಂ ವಿಡಿಯೋ ಕುರಿತು ಸಾಕಷ್ಟು ಮಂದಿ ಬೇಸರ ಹೊರ ಹಾಕಿದ್ದಾರೆ. ಗೀತೆ ರಿಲೀಸ್ ಮಾಡುತ್ತಿದ್ದಂತೆ ಸಾಧಕರು ಇಷ್ಟೆ ಜನನಾ? ಉಳಿದ ಸಾಧಕರೆಲ್ಲಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಸ್ಯಾಂಡಲ್ ವುಡ್ ನ ಅನೇಕ ಕಲಾವಿದರು ಮಿಸ್ ಆಗಿದ್ದಾರೆ. ಉಳಿದ ಕಲಾವಿದರೆಲ್ಲಿ, ಕೇವಲ ನಟರು ಮಾತ್ರ ಇದ್ದಾರೆ, ನಟಿಯರು ಸಾಧನೆ ಮಾಡಿಲ್ಲವಾ ಎಂದು ಜನರು ತರಾಟೆ ತೆಗೆದುಕೊಂಡಿದ್ದಾರೆ.