ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಹುಟ್ಟುಹಬ್ಬದ ಸಂಭ್ರಮದಲ್ಲಿ ನಿರೂಪ್ ಭಂಡಾರಿ: ನೆಚ್ಚಿನ ನಟನಿಗೆ ಶುಭಾಶಗಳ ಸುರಿಮಳೆ
ಎಂಜಿನಿಯರಿಂಗ್ ಪದವೀಧರರಾದ ನಿರೂಪ್ ಭಂಡಾರಿ ಆಯ್ಕೆ ಮಾಡಿಕೊಂಡಿದ್ದು ಮಾತ್ರ ಬಣ್ಣದ ಬದುಕನ್ನು. ರತನ್ ಠಾಕೋರ್ ಗ್ರಾಂಟ್ ನಲ್ಲಿ ನಟನಾ ತರಬೇತಿ ಪಡೆದ ನಿರೂಪ್ ಭಂಡಾರಿ ಮೊದಲು ಧಾರವಾಹಿಗಳಲ್ಲಿ ಬಣ್ಣ ಹಚ್ಚಿದ್ದರು. ಧಾರವಾಹಿಯಲ್ಲಿ ಅಡ್ವೋಕೇಟ್ ಅರ್ಜುನ್ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡ ನಿರೂಪ್ ಬಳಿಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟರು.
2015ರಲ್ಲಿ ತೆರೆಕಂಡ ರಂಗಿತರಂಗ ಸಿನಿಮಾದ ಮೂಲಕ ಚಂದನವನದಲ್ಲಿ ನಾಯಕನಾಗಿ ಗುರುತಿಸಿಕೊಂಡ ನಿರೂಪ್ ಭಂಡಾರಿ ಮೊದಲ ಸಿನಿಮಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರು. ಆ ಬಳಿಕ ರಾಜರಥ ಹಾಗೂ ಆದಿ ಲಕ್ಷ್ಮಿ ಪುರಾಣ, ವಿಂಡೋ ಸೀಟ್ ನಲ್ಲೂ ಗುರುತಿಸಿಕೊಂಡರು. ಸದ್ಯ ಸುದೀಪ್ ಜೊತೆ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿರೋ ನಿರೂಪ್ ಭಂಡಾರಿ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿ ಅನ್ನೋದು ಅವರ ಅಭಿಮಾನಿಗಳ ಆಶಯ.
