• March 18, 2026

ಸ್ವಾತಂತ್ರ್ಯ ಮಹೋತ್ಸವ ಪ್ರಯುಕ್ತ ಹೊಸಪೇಟೆಗೆ ಆಗಮಿಸಲಿರೋ ಸನ್ನಿ ಲಿಯೋನ್

ಬಾಲಿವುಡ್ ಹಾಟ್ ಬ್ಯೂಟಿ ಸಲ್ಲಿ ಲಿಯೋನ್ ಈಗಾಗ್ಲೆ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಸದ್ದು ಮಾಡಿದ್ದಾರೆ. ಇದೀಗ ಮತ್ತೆ ಸನ್ನಿಯನ್ನ ಕರೆತರೋಕೆ ರೆಡಿಯಾಗಿದ್ದಾರೆ. ಅಂದಹಾಗೆ ಸನ್ನಿ ಲಿಯೋನ್ ಈ ಭಾರಿ ಬರ್ತಿರೋದು ಸಿನಿಮಾಗಲ್ಲ ಬದಲಾಗಿ ಪ್ರಶಸ್ರಿ ಪ್ರಧಾನ ಮಾಡಲು.  ಸನ್ನಿಲಿಯೋನ್ ರಿಂದ ಪ್ರಶಸ್ತಿ ಸ್ವೀಕರಿಸ್ಬೇಕು ಅನ್ನೋ ಆಸೆ ಯಾರಿಗೆ ತಾನೇ ಇರಲ್ಲ. ಇದೀಗ ಅಂತದೊಂದು ಆಸೆ ಈಡೇರಿಸಲು ಹೊಸಪೇಟೆಯ ಕರುನಾಡ ಕ್ರಿಯಾಶೀಲ ಸಮಿತಿ ಮುಂದಾಗಿದೆ. ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ವಿಜಯನಗರ ಕೇಂದ್ರ ಸ್ಥಾನ ಹೊಸಪೇಟೆಯಲ್ಲಿ ಕರುನಾಡ ಕ್ರಿಯಾಶೀಲ ಸಮಿತಿ ವತಿಯಿಂದ ಗುಡ್ಡು ಹತ್ತುವ ಹಾಗೂ ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಈ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರಧಾನ ಮಾಡಲು ಸನ್ನಿ ಲಿಯೋನ್ ಗೆ ಆಹ್ವಾನ ನೀಡಲಾಗಿದೆ. ವಿಜಯನಗರದಲ್ಲಿ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ್ ಖುದ್ದು ಸನ್ನಿ ಲಿಯೋನ್ ರನ್ನ ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ. ಆಗಸ್ಟ್ 15ರಂದು ಚಾಂಪಿಯನ್ ಸಿನಿನಾ ತಂಡ ಹೊಸಪೇಟೆಗೆ ಆಗಮಿಸುತ್ತಿದೆ. ಈ ಚಿತ್ರದಲ್ಲಿ ಸನ್ನಿ ಲಿಯೋನ್ ಐಟಂ ಸಾಂಗ್ ಒಂದಕ್ಕೆ ಹಜ್ಜೆ ಹಾಕಿದ್ದಾರೆ. ಸನ್ನಿ ಲಿಯೋನ್ ಬರೋ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now