• June 17, 2026

ಪ್ರಧಾನಿ ಮೋದಿಗೆ ರಾಖಿ ಕಟ್ಟಿದ ಮಕ್ಕಳು

ಇಂದು ಎಲ್ಲೆಡೆ ರಾಖಿ ಹಬ್ಬದ ಸಂಭ್ರಮ. ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಿ ಸಂಭ್ರಮಿಸುತ್ತಾರೆ. ಅಂತೆಯೇ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ನಿವಾಸದಲ್ಲಿ ರಕ್ಷಬಂಧನವನ್ನು ಆಚರಿಸಿದ್ದು, ಈ ವೇಳೆ ತಮ್ಮ ನಿವಾಸದ ಸಿಬ್ಬಂದಿಯ ಹೆಣ್ಣುಮಕ್ಕಳು ಮೋದಿಗೆ ರಾಖಿ ಕಟ್ಟಿದರು. ಮೋದಿ ಮನೆಯಲ್ಲಿ ನಡೆದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಸಾಕಷ್ಟು ಮಂದಿ ಮೋದಿಗೆ ರಕ್ಷಾಬಂಧನ ಕಟ್ಟಿ ಶುಭ ಹಾರೈಸಿದ್ದಾರೆ. ಮೋದಿ ಕಚೇರಿಯಲ್ಲಿ ಕೆಲಸ ಮಾಡುವ ಕಸ ಗುಡಿಸುವ, ತೋಟಗಾರರು, ಚಾಲಕರು ಸೇರಿದಂತೆ ಇನ್ನಿತರೆ ಕೆಲಸ ಮಾಡುವ ಸಿಬ್ಬಂದಿಯ ಹೆಣ್ಣು ಮಕ್ಕಳು  ಭಾಗಿಯಾಗಿ ಮೋದಿಗೆ ರಾಖಿ ಕಟ್ಟಿದ್ದರು. ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ರಕ್ಷಾ ಬಂಧನದ ಪ್ರಯುಕ್ತ ಎಲ್ಲರಿಗೂ ಶುಭಾಶಯವನ್ನು ಕೋರಿ ಟ್ವೀಟ್ ಮಾಡಿದ್ದರು.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now