• June 2, 2026

ಲೈಂಗಿಕ ಸಂಪರ್ಕ ಬಯಸಿ ಬರುವ ಹೆಣ್ಣುಮಕ್ಕಳ ಬಗ್ಗೆ ಎಚ್ಚರವಿರಲಿ: ಶಕ್ತಿಮಾನ್ ಖ್ಯಾತಿಯ ಮುಖೇಶ್

ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು ಅಂಥವರ ಬಗ್ಗೆ ಹುಡುಗರು ಎಚ್ಚರಿಕೆಯಿಂದ ಇರುವಂತೆ ಶಕ್ತಿಮಾನ್ ಖ್ಯಾತಿಯ ಮುಖೇಶ್ ಸಲಹೆ ನೀಡಿದ್ದಾರೆ. ಇನ್​ಸ್ಟಾಗ್ರಾಮ್​, ಫೇಸ್​ಬುಕ್​ ಸೇರಿದಂತೆ ಹಲವು ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹುಡುಗಿಯರ ಫೋಟೋಗಳನ್ನು ಹಾಕಲಾಗಿರುತ್ತದೆ. ಹುಡುಗಿಯರ ಬೆತ್ತಲೆ ದೇಹ ನೋಡಬೇಕಾದರೆ ಹಣ ಪೇ ಮಾಡಿ ವಿಡಿಯೋ ಕಾಲ್ ಮಾಡಿ ಎಂದು ಆ ಖಾತೆಗಳಲ್ಲಿ ಬರೆಯಲಾಗಿರುತ್ತದೆ. ಈ ರೀತಿಯ ಜನರನ್ನು ನಂಬಲೇಬಾರದು. ಅಲ್ಲದೆ ಲೈಂಗಿಕ ಸಂಪರ್ಕ ಹೊಂದಬೇಕು ಎಂದು ಬರುವ ಹುಡುಗಿಯರನ್ನು ನಂಬಲೇ ಬೇಡಿ ಎಂದು ಮುಕೇಶ್ ಎಚ್ಚರಿಕೆ ನೀಡಿದ್ದಾರೆ. `ಕ್ಯಾ ಆಪ್ಕೋ ಭಿ ಐಸಿ ಲಡ್ಕಿಯಾ ಲುಭಾತಿ ಹೈ’ ಶೀರ್ಷಿಕೆಯ ವೀಡಿಯೋದಲ್ಲಿ ಮುಖೇಶ್ ಈ ಬಗ್ಗೆ ಮಾತನಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಪರ, ವಿರೋಧಗಳು ಕೇಳಿ ಬರ್ತಿದೆ. 1997ರಿಂದ 2005ರವರೆಗೆ ಪ್ರಸಾರವಾದ ಶಕ್ತಿಮಾನ್ ಧಾರವಾಹಿಯಲ್ಲಿ ಮುಖೇಶ್ ಸೂಪರ್ ಹಿರೋ ಆಗಿ ಕಾಣಿಸಿಕೊಂಡಿದ್ದರು. ಈ ಧಾರವಾಹಿ ಮುಖೇಶ್ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿದ್ದು ಮಕ್ಕಳ ಮೆಚ್ಚಿನ ಧಾರವಾಹಿಗಳೊಂದಾಗಿತ್ತು.  

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now