• March 15, 2026

ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಶುರವಾಯ್ತು ಲವ್ ಕಹಾನಿ

ಕನ್ನಡದ ಬಿಗ್ ಬಾಸ್ ಓಟಿಟಿ ಆರಂಭವಾಗಿ ಕೆಲ ದಿನಗಳೇ ಕಳೆದು ಹೋಗಿದೆ. ಇದುವರೆಗೂ ತಮ್ಮ ಜೀವನದ ಘಟನೆಗಳನ್ನು ಸ್ಪರ್ಧಿಗಳು ಮೆಲುಕು ಹಾಕಿ ಕಣ್ಣೀರು ಹಾಕಿದ್ದರು. ಇದೀಗ ದೊಡ್ಮನೆ ಒಳಗೆ ಲವ್ವಿ ಡವ್ವಿ ಶುರುವಾಗಿದೆ. ದೊಡ್ಮನೆ ಒಳಗೆ ನಟ ರಾಕೇಶ್ ಹಾಗೂ ಸ್ಪೂರ್ತಿ ಗೌಡ ದಿನಕಳೆದಂತೆ ಹತ್ತಿರವಾಗುತ್ತಿದ್ದು ಈ ವಿಚಾರ ಸಾಕಷ್ಟು ಸುದ್ದಿಯಾಗುತ್ತಿದೆ. ಬಿಗ್ ಬಾಸ್ ಮನೆ ಕಾಲಿಟ್ಟ ವಾರದೊಳಗೆ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿಕೊಂಡಿರೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಹಾಗೂ ಸ್ಪೂರ್ತಿ ಗೌಡ ಹೆಚ್ಚಿನ ಸಮಯ ಒಟ್ಟಾಗಿ ಕಾಣಿಸಿಕೊಳ್ತಿದ್ದಾರೆ. ಈ ವೇಳೆ  ‘ನಿಮಗೆ ಯಾರ ಮೇಲಾದರೂ ಲವ್ ಆದರೆ ಹೇಳ್ತೀರಾ?’ ಎಂದು ಸ್ಫೂರ್ತಿಗೆ ರಾಕೇಶ್ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಉತ್ತರಿಸಿದ ಸ್ಫೂರ್ತಿ ‘ನಾನಾಗಿ ಯಾರಿಗೂ ಪ್ರಪೋಸ್ ಮಾಡಲ್ಲ. ಹುಡುಗನೇ ನನ್ನ ಬಳಿ ಬಂದು ಪ್ರೀತಿ ಹೇಳಿಕೊಳ್ಳಬೇಕು. ಆ ರೀತಿ ಮಾಡ್ತೀನಿ’ ಎಂದಿದ್ದಾರೆ. ‘ನೀನು ಟಿಪಿಕಲ್ ಹುಡುಗಿ ತರ ಆಡ್ತೀರಲ್ಲ. ಲವ್ ಆದ್ರೆ ಲವ್ ಆಗಿದೆ ಎಂದು ಹೇಳಿಕೊಳ್ಳಬೇಕು. ಅಟ್ಲೀಸ್ಟ್​ ಇಷ್ಟ ಇದೆ ಎಂದ್ರೆ ಇಷ್ಟ ಇದೆ ಅಂತ ಹೇಳಿ’ ಎಂದು ಸ್ಫೂರ್ತಿಗೆ ರಾಕೇಶ್ ಹೇಳಿದ್ದಾರೆ, ‘ಇಲ್ಲಿ ಯಾರೂ ಇಷ್ಟ ಆಗಿಲ್ಲ. ಮನೆ ಹೊರಗೆ ಹೋಗಿ ಯಾರಾದರೂ ಇಷ್ಟ ಆದರೆ, ಇಷ್ಟ ಆಗಿದೆ ಅಂತ ಹೇಳ್ತೀನಿ’ ಎಂದು ರಾಕೇಶ್ ಪ್ರಶ್ನೆಗೆ ಸ್ಪೂರ್ತಿ ಉತ್ತರಿಸಿದ್ದಾರೆ. ಸ್ಪರ್ತಿ ಹಾಗೂ ರಾಕೇಶ್ ಇಬ್ಬರಿಗೂ ಬಣ್ಣದ ಬದುಕಿನ ನಂಟಿದೆ. ರಾಕೇಶ್ ಈಗಾಗ್ಲೆ ಕೆಲ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.ಇನ್ನೂ ಸ್ಫೂರ್ತಿ ಗೌಡ ಕೂಡ ತೆಲುಗು ಧಾರವಾಹಿಯೊಂದರಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅದನ್ನೂ ಅರ್ಧಕ್ಕೆ ಬಿಟ್ಟು ವಾಪಸ್ ಆಗಿದ್ದಾರೆ.

karnatakaspecial.in

https://karnatakaspecial.in/

Related post

Phone icon
Call Now
Reach us!
WhatsApp icon
Chat Now