ಕಿಚ್ಚ ಸುದೀಪ್ ನಟನೆಯ 2002ರಲ್ಲಿ ತೆರೆಗೆ ಬಂದ ಧಮ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಅದೇ ಹೊಸರಿನಲ್ಲಿ ಹೊಸಬರ ತಂಡವೊಂದು ಸಿನಿಮಾವನ್ನು ಕಂಪ್ಲೀಟ್ ಮಾಡಿದೆ. ಈಗಾಗ್ಲೆ ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಪ್ರೇಕ್ಷಕರ ಮನ ಗೆಲ್ಲುವಲ್ಲಿ ಸಕ್ಸಸ್ ಆಗಿದೆ.
ಅಂದಹಾಗೆ ಈ ಸಿನಿಮಾಗೆ ಮೊದಲು ಸಂಚಾರಿ ವಿಜಯ್ ರನ್ನು ಹಿರೋ ಆಗಿ ಆಯ್ಕೆ ಮಾಡಿಕೊಳ್ಳುವ ಕುರಿತು ಮಾತುಕತೆ ನಡೆದಿದ್ದು. ಆದರೆ ಸಂಚಾರಿ ವಿಜಯ್ ಅವರ ದಿಡೀರ್ ನಿಧನದ ಹಿನ್ನೆಲೆಯಲ್ಲಿ ಶ್ರೀಜಿತ್ ನಾಯಕನಾಗಿ ನಟಿಸಿದ್ದಾರೆ. ವಿಆರ್ ಆರ್ ನಿರ್ದೇಶನದ ಮಾಡಿರುವ ಧಮ್ ಸಿನಿಮಾದಲ್ಲಿ ಶ್ರೀಜಿತ್ ಜೋಡಿಯಾಗಿ ಎರೀನ್ ಅಧಿಕಾರಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ‘ಧಮ್’ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದ್ದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್, ಕಾರ್ಯದರ್ಶಿ ಕುಶಾಲ್ ಚಂದ್ರಶೇಖರ್ ಹಾಗೂ ನಟ, ನಿರ್ದೇಶಕ ರವಿಕಿರಣ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಧಮ್ ಸಿನಿಮಾದ ನಟ ಶ್ರೀಜಿತ್ ಮಾತನಾಡಿ, ‘ವಿಆರ್ಆರ್ ಅವರಂತಹ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ಖುಷಿ ಇದೆ. ನಾನು ಈ ಮೊದಲು ‘ರಂಗ್ ಬಿ ರಂಗಿ’ ಚಿತ್ರದಲ್ಲಿ ಹೀರೋ ಆಗಿದ್ದು, ಇದು ನನ್ನ 2ನೇ ಸಿನಿಮಾ. ಆಕ್ಷನ್, ಥ್ರಿಲ್ಲರ್, ಸೆಂಟಿಮೆಂಟ್ ಸೇರಿದಂತೆ ಎಲ್ಲ ಅಂಶಗಳು ನಮ್ಮ ಸಿನಿಮಾದಲ್ಲಿ ಇವೆ’ ಎಂದಿದ್ದಾರೆ.
ಶ್ರೀಜಿತ್ ಗೆ ಜೋಡಿಯಾಗಿರುವ ಎರೀನ್ ಅಧಿಕಾರಿ ಮೂಲತಃ ಬಂಗಾಳದವರು. ೀಗಾಗ್ಲೆ ಬಂಗಾಳಿ, ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಎರೀನ್ ಗೆ ಇದು ಮೊದಲ ಕನ್ನಡ ಸಿನಿಮಾ.
‘ನಾನು ಬಾಲನಟನಾಗಿ ‘ಹಾತಿ ಮೇರೆ ಸಾತಿ’ ಸೇರಿದಂತೆ ಸುಮಾರು ನೂರೈವತ್ತಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಹದಿನಾರು ಚಿತ್ರಗಳನ್ನು ನಿರ್ದೇಶಿಸಿದ್ದೇನೆ. ನನ್ನ ತಾಯಿ ಮೈಸೂರಿನವರು. ಅವರಿಗೆ ನಾನು ಕನ್ನಡ ಚಿತ್ರವೊಂದಕ್ಕೆ ನಿರ್ದೇಶನ ಮಾಡಬೇಕು ಎಂಬ ಆಸೆಯಿತ್ತು. ಅದು ‘ಧಮ್’ ಮೂಲಕ ಈಡೇರಿದೆ’ ಎಂದು ನಿರ್ದೇಶಕ ವಿಆರ್ಆರ್ ಹೇಳಿದ್ದಾರೆ.