ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಾಕಿಂಗ್ ಸ್ಟಾರ್ ಯಶ್ ನನ್ನ ಫೇವರಿಟ್ ನಟ ಎಂದ ನಾಗಚೈತನ್ಯ
ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ನಾಗ ಚೈತನ್ಯ ಅವರಿಗೆ ನಿರೂಪಕ, ‘ನಿಮ್ಮ ಇಷ್ಟದ ಪ್ಯಾನ್ ಇಂಡಿಯಾ ಸ್ಟಾರ್ ಯಾರು ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ನಾಗ ಚೈತನ್ಯ ರಾಕಿಂಗ್ ಸ್ಟಾರ್ ಯಶ್ ಎಂದು ಹೇಳಿದರು. ಬಳಿಕ ನಿರೂಪಕ ಕೆಜಿಎಫ್ ಸಿನಿಮಾವನ್ನು ನಿಜಕ್ಕೂ ಇಷ್ಟ ಪಟ್ರಾ ಎಂದು ಕೇಳಿದರು. ಇದಕ್ಕೆ ನಾಗ ಚೈತನ್ಯ ಹೌದು, ನನಗೆ ಕೆಜಿಎಫ್ ತುಂಬಾ ಇಷ್ಟವಾಯಿತು ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು ಯಶ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ.
ಇತ್ತೀಚೆಗೆ ಕಾಫಿ ವಿತ್ ಕರಣ್ ಶೋನಲ್ಲಿ ಭಾಗವಹಿಸಿದ್ದ ನಟಿ ಸಮಂತಾ ಕೂಡ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದರು. ಜಿಪಿಎಸ್ ನಲ್ಲಿ ಯಾರ ಧ್ವನಿ ಕೇಳಲು ಇಷ್ಟಪಡುತ್ತೀರಿ ಎಂದು ಕೇಳಿದ್ದಕ್ಕೆ, ಸಮಂತಾ ಯಶ್ ಹೆಸರು ಹೇಳಿದ್ದರು. ಸಮಂತಾ ಅವರ ಆ ವಿಡಿಯೋ ಸಖತ್ ವೈರಲ್ ಆಗಿದ್ದು ಆ ಬೆನ್ನಲ್ಲೆ ಇದೀಗ ನಾಗಚೈತನ್ಯ ಕೂಡ ಯಶ್ ಇಷ್ಟಅಂದಿರೋದು ಯಶ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
. @chay_akkineni 's favourite Pan India Star is @TheNameIsYash BOSS 😎❤️#YashBoss #TeamYash #Yash pic.twitter.com/PRrNqcyBpV
— Team Yash FC (@TeamYashFC) August 9, 2022
